ಹೈದರಾಬಾದ್ : ನಾಗ ಶೌರ್ಯ ತೆಲುಗು ಚಿತ್ರದ ಜನಪ್ರಿಯ ನಾಯಕರಲ್ಲಿ ಒಬ್ಬರಾಗಿದ್ದಾರೆ. 2011 ರ ಕ್ರಿಕೆಟ್ , ಗರ್ಲ್ಸ್ ಮತ್ತು ಬಿಯರ್ ಚಿತ್ರದೊಂದಿಗೆ ಟಾಲಿವುಡ್ ನಲ್ಲಿ ವೃತ್ತಿ ಜೀವನವನ್ನು ಪ್ರಾರಂಭಿಸಿದರು.
ಇತ್ತೀಚಿನ ಮಾಹಿತಿ ಪ್ರಕಾರ ನಾಗಶೌರ್ಯ ಮುಂಬರುವ ಚಿತ್ರಗಳಿಗೆ 4 ಕೋಟಿ ಸಂಭಾವನೆ ಕೇಳುತ್ತಿದ್ದಾರಂತೆ. ಅದಕ್ಕಿಂತ ಕಡಿಮೆ ಸಂಭಾವನೆ ಪಡೆಯಲು ಅವರು ಒಪ್ಪುತ್ತಿಲ್ಲ ಎನ್ನಲಾಗಿದೆ. ಅವರ ಬೇಡಿಕೆ ಕೇಳಿ ಚಿತ್ರ ನಿರ್ಮಾಪಕರು ಆಘಾತಕ್ಕೊಳಗಾಗಿದ್ದಾರೆ. ಯುವ ನಾಯಕ ಇಷ್ಟು ಹೆಚ್ಚಿನ ಸಂಭಾವನೆ ಕೇಳುತ್ತಿರುವುದು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ.