ಉಪ್ಪೇನಾ ಚಿತ್ರದ ಬಳಿಕ ತಮ್ಮ ಸಂಭಾವನೆ ಹೆಚ್ಚಿಸಿದ ನಟಿ ಕೃತಿ ಶೆಟ್ಟಿ

ಗುರುವಾರ, 25 ಫೆಬ್ರವರಿ 2021 (11:24 IST)
ಹೈದರಾಬಾದ್ : ನಟ ವೈಷ್ಣವ್ ತೇಜ್ ಮತ್ತು ನಟಿ ಕೃತಿ ಶೆಟ್ಟಿ ಜೊತೆಯಾಗಿ ನಟಿಸಿದ ಚೊಚ್ಚಲ ಚಿತ್ರ ‘ಉಪ್ಪೇನಾ’ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಬಳಿಕ ನಟಿ ಕೃತಿ ಶೆಟ್ಟಿಗೆ ಹೆಚ್ಚಿನ ಆಫರ್ ಗಳು ಬರುತ್ತಿವೆ. ಹಾಗಾಗಿ ಇದೀಗ ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ.

ಕೃತಿ ಶೆಟ್ಟಿ ಉಪ್ಪೇನಾದಲ್ಲಿ ನಟಿಸಲು 6ಲಕ್ಷ ರೂ ಸಂಭಾವನೆ ಪಡೆದಿದ್ದಾರಂತೆ. ಇದೀಗ ಅವರು ತಮ್ಮ ಸಂಭಾವನೆಯನ್ನು ಆರು ಪಟ್ಟು ಹೆಚ್ಚಿಸಿದ್ದು, ಮುಂಬರುವ ಚಿತ್ರಗಳಿಗೆ 60ಲಕ್ಷ ರೂ ಬೇಡಿಕೆ ಇಟ್ಟಿದ್ದಾರಂತೆ. ಇದಕ್ಕೆ ನಿರ್ಮಾಪಕರು ಕೂಡ ಒಪ್ಪಿದ್ದಾರೆ ಎನ್ನಲಾಗಿದೆ.

ಕೃತಿ ಶೆಟ್ಟಿ ಇದೀಗ ನಾನಿ ಜೊತೆ ಶ್ಯಾಮ್ ಸಂಗಾ ರಾಯ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೇ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಜೂನಿಯರ್ ಎನ್ ಟಿಆರ್ ನಟನೆಯ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ