ತನ್ನನ್ನು ರೇಪ್ ಮಾಡುವಂತೆ ಆಹ್ವಾನಿಸಿದ ಶ್ರೀದೇವಿ...?!

ಮಂಗಳವಾರ, 7 ಜುಲೈ 2015 (10:55 IST)
ಕನ್ನಡ ಚಿತ್ರ ಚಕ್ರವ್ಯೂಹ. ಅದರಲ್ಲಿ ಡಾ. ಅಂಬರೀಶ್ ಮತ್ತು ಅಂಬಿಕ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಆ ಚಿತ್ರ ಹಿಂದಿ ಭಾಷೆಗೂ ಸಹಿತ ರೀಮೇಕ್ ಆಗಿತ್ತು. ಅಮಿತಾಬ್ ಬಚ್ಚನ್ ಮತ್ತು ಶ್ರೀದೇವಿ ಅವರು ನಟಿಸಲು ನಿಕ್ಕಿ ಆಗಿದ್ದ ಆ ಚಿತ್ರದಲ್ಲಿ ಎಂಪಿ ಮಗನ ಪಾತ್ರಧಾರಿಯಾಗಿ ಕನ್ನಡದ ನಟನನ್ನೇ ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ ಆತ ಕಾರಣಾಂತರದಿಂದ ಅದರಲ್ಲಿ ನಟಿಸಲಾಗಲಿಲ್ಲ, ಅದರ ಬದಲಿಗೆ  ಬ್ಯಾನರ್ಜಿ ಎನ್ನುವ ತೆಲುಗು ಕಲಾವಿದರನ್ನು ಆಯ್ಕೆ ಮಾಡಿ ಅದರಲ್ಲಿ ನಟಿಸುವ ಅವಕಾಶ ನೀಡಿದರು. ನಿರ್ದೇಶಕನಾಗುವ ಕನಸು ಹೊತ್ತುಬಂದ ಬ್ಯಾನರ್ಜಿ ನಟರಾಗಿ ಜನಪ್ರಿಯರಾದರು. ಗಾಯಂ ಗುಲಾಬಿ, ನುವ್ವು ನೇನು ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ ಈತ ಶ್ರೀದೇವಿಯನ್ನು ರೇಪ್ ಮಾಡುವ ದೃಶ್ಯ ಇಂಕ್ವಿಲಾಬ್ ನಲ್ಲಿ ಇತ್ತು. 
ಶ್ರೀದೇವಿ ಅಷ್ಟೊತ್ತಿಗೆ ಬೆಳ್ಳಿತೆರೆಯಲ್ಲಿ ತುಂಬಾ ಹೆಸರು ಪಡೆದ ನಟಿಯಾಗಿದ್ದರು. ಈತ ಸಾಮಾನ್ಯ. ಇಂತಹ ನಟಿ ಜೊತೆ ಈ ರೀತಿಯ ದೃಶ್ಯದಲ್ಲಿ ನಟಿಸುವ  ಬಗ್ಗೆ ಗೊಂದಲ,ಆತಂಕ ಉಂಟಾಗಿತ್ತು. ಆತ ಶ್ರೀದೇವಿ ಜೊತೆ ಭಯಭಯವಾಗಿ ನಟಿಸುವಾಗ ಪರವಾಗಿಲ್ಲ ಬ್ಯಾನರ್ಜಿ ಸಹಜವಾಗಿ ನಟಿಸು ನನಗೇನೂ ಅನ್ನಿಸಲ್ಲ, ಎಂದು ನಟನಿಗೆ ಪ್ರೋತ್ಸಾಹ ನೀಡಿದರಂತೆ.  ಆ ಬಳಿಕ ನಟ ರೇಪ್ ಕಲೆಯನ್ನು ಅವರು ತೋರಿಸಿದರಂತೆ!! ಆ ದೃಶ್ಯದಲ್ಲಿ ಭಾಗವಹಿಸುವಾಗ ಬ್ಯಾನರ್ಜಿ ಅವರ  ಪ್ರೀತಿಯ ಚಿನ್ನದ  ಚೈನ್ ಚೂರು ಚೂರಾಯಿತಂತೆ. ಈ ಎಲ್ಲ ಸಂಗತಿಗಳನ್ನು ಬ್ಯಾನರ್ಜಿ  ಪತ್ರಿಕೆ ಒಂದಕ್ಕೆ ನೀಡಿದ  ಸಂದರ್ಶನದಲ್ಲಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ