ಒಳ್ಳೆ ಕಥೆ ಸಿಕ್ಕರೆ ಮಗಳನ್ನು ಸಿನಿರಂಗಕ್ಕೆ ಪರಿಚಯ ಮಾಡ್ತಾರಂತೆ ಶ್ರೀದೇವಿ

ಸೋಮವಾರ, 6 ಜುಲೈ 2015 (09:54 IST)
ಭಾರತೀಯ ಚಿತ್ರರಂಗದಲ್ಲಿ ತನ್ನದೇ ಅದ ಅಪರೂಪದ ಸ್ಥಾನ ಪಡೆದ ನಟಿ ಶ್ರೀದೇವಿ. ದಕ್ಷಿಣ ಭಾರತದಷ್ಟೇ ಪ್ರಭಾವಶಾಲಿಯಾಲಿ ಉತ್ತರ ಭಾರತದ ಸಿನಿರಸಿಕರನ್ನು ಸೆಳೆದ ನಟಿ ಶ್ರೀದೇವಿ. ಈಗ ಆಕೆಗೆ ಮತ್ತೆ ಸಿನಿಮಾಗಳಲ್ಲಿ ನಟಿಸಲು ಆರಂಭ ಮಾಡಿದ್ದಾರೆ. ಮದುವೆಯಾಗಿ ಎರಡು ಮಕ್ಕಳ ತಾಯಿ ಆದ ಬಳಿಕ ಸ್ವಲ್ಪ ವರ್ಷಗಳ ಕಾಲ ಸಿನಿ ರಂಗದ ಕಡೆಗೆ ಬಂದಿರಲಿಲ್ಲ. ಆದರೆ ಈಗ ಮತ್ತೆ ಸಿನಿಮಾರಂಗಕ್ಕೆ ಬಂದಿದ್ದಾರೆ. ಜೊತೆಗೆ ಬೆಳೆದ ಮಗಳು ಜಾನ್ಹವಿಯು ಸಹ ಚಿತ್ರರಂಗಕ್ಕೆ ಬರಲು ಬೇಕಾದ ಅಂಶಗಳ ಕಡೆಗೆ ಶ್ರೀದೇವಿ ಚಿತ್ತ ನೆಟ್ಟಿದ್ದಾರೆ.
ಶ್ರೀ ಅವರ ದೊಡ್ಡ ಮಗಳು ಜಾನ್ಹವಿ ಈಗ ಚೊಚ್ಚಲ ಚಿತ್ರದಲ್ಲಿ ನಟಿಸ ಬೇಕಿದೆ. ತನ್ನ ಮಗಳ ಎಂಟ್ರಿ ಒಳ್ಳೆಯ ಕಥೆ ಸಿಕ್ಕಿದರೆ ತೆಲುಗು, ತಮಿಳು  ಭಾಷೆಗಳಲ್ಲಿ  ಬೇಕಾದರೂ ತನ್ನ ಮಗಳು ಸಿನಿಮಾದಲ್ಲಿ ನಟಿಸಲು ಸಮ್ಮತಿ ಮುದ್ರೆ ನೀಡುವುದಾಗಿ ಇಂಡಸ್ಟ್ರಿ ಜನರ ಮುಂದೆ ಹೇಳಿದ್ದಾರೆ. ಬೋನಿಕಪೂರ್ ಪುತ್ರಿ ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಅವರ ಜೊತೆ ನಟಿಸುತ್ತಾರೆ ಎನ್ನುವ ಸುದ್ದಿ ಇತ್ತು. ಏಕೆಂದರೆ ಸಲ್ಮಾನ್ ಖಾನ್ ಹೊಸ ನಟಿಯರ ಲಕ್ಕಿ ಆಕ್ಟರ್. ಆದರೆ ಆ ರೀತಿ ಆಗಿಲ್ಲ. ಆದ ಕಾರಣ ಶ್ರೀದೇವಿ ಈಗ ಬಾಲಿವುಡ್ ಜೊತೆಗೆ ಕಾಲಿವುಡ್ ಮತ್ತು ಟಾಲಿವುಡ್ ಕಡೆಗೂ ತಮ್ಮ ಚಿತ್ತ ನೆಟ್ಟಿದ್ದಾರೆ. ನೋಡುವ ಯಾರಿಗೆ ಜಾನ್ಹವಿ ಜೊತೆ ನಟಿಸುವ ಅದೃಷ್ಟ ಕಾದಿದೆ ಎಂದು!

ವೆಬ್ದುನಿಯಾವನ್ನು ಓದಿ