'ಪುಲಿ'ಯ ರಾಜಮಾತೆ ಶ್ರೀದೇವಿಗೆ ಅಸಲಿ ಒಡವೆ ಬಳಕೆ

ಸೋಮವಾರ, 29 ಜೂನ್ 2015 (10:25 IST)
ಶ್ರೀದೇವಿ ಅವರು ಪುಲಿ ಚಿತ್ರದ ಮೂಲಕ ಈಗ ಅಬ್ಬರದಿಂದ ಸಿನಿರಂಗಕ್ಕೆ ಎಂಟ್ರಿ ಆಗುತ್ತಿದ್ದಾರೆ. ಅವರು ಪುಲಿ ಚಿತ್ರದ ನಟನೆಗೆಂದು ಪಡೆದ ಸಂಭಾವನೆ ಐದು ಕೋಟಿರೂಗಳು. ಆಕೆ ಆ ಪಾತ್ರಕ್ಕೆಂದು ಪಟ್ಟ ಕಷ್ಟಗಳು, ಆಕೆ  ಆ ಪಾತ್ರಕ್ಕೆಂದು  ಮಾಡಿದ ಮೇಕಪ್  ಬಗ್ಗೆ ಹೊರ ಬಂದ ಸುದ್ದಿಗಳಿಂದ ಆಶ್ಚರ್ಯ ಚಕಿತರಾಗಿದ್ದಾರೆ ಸಿನಿಮಾ ಮಂದಿ. ಈಗ ಆಕೆಯ ರಾಣಿ ಪಾತ್ರದ ಫಸ್ಟ್ ಲುಕ್ ಹೊರ ಬಂದಿದೆ. 
ಈ ಪಾತ್ರದಲ್ಲಿ ಆಕೆ ಫಳಫಳ ಎಂದು ಹೊಳೆಯುವ ಕಿರೀಟ ಮತ್ತು ಚಿನ್ನದ ಒಡವೆಗಳನ್ನು ಧರಿಸಿದ್ದು, ಅದು 15  ಕಿಲೋಗಳಷ್ಟು ತೂಕವನ್ನು ಹೊಂದಿದೆಯಂತೆ. ಈ ಚಿತ್ರದಲ್ಲಿ ಶ್ರೀದೇವಿ ತಮ್ಮ ಪಾತ್ರದ ಮೇಕಪ್ ಗಾಗಿ ಐದು ಗಂಟೆಗಳ ಕಾಲ ಕಷ್ಟಪಡ ಬೇಕಾಯ್ತಂತೆ. ಅಂದರೆ ಬೆಳಿಗ್ಗೆ ಒಂಭತ್ತಕ್ಕೆ ಆಕೆ ಮೇಕಪ್ ಮ್ಯಾನ್ ಮುಂದೆ ಕುಳಿತು ಬಿಡುತ್ತಿದ್ದರಂತೆ ಹಾಗಂತ ಸಿನಿಮಾ ಯೂನಿಟ್ ನವರು ಹೇಳಿದ್ದಾರೆ.  
 
ಈ ಶೂಟಿಂಗ್ ಬಿಸಿಲಿನಲ್ಲಿ ನಡೆದರೂ ಸಹಿತ ಯಾವುದೇ ರೀತಿಯ ಬೇಸರ, ಕಿರಿಕಿರಿ ಇಲ್ಲದೆ ಚಿತ್ರೀಕರಣದಲ್ಲಿ ಭಾಗವಸಿದ್ದಲ್ಲದೆ, ಇದಕ್ಕೆಂದು ಕತ್ತಿವರಸೆ ಕಲಿತ ಬಗೆ, ಅದಕ್ಕಾಗಿ ಆಕೆ ತೋರಿದ ಉತ್ಸಾಹ, ಭಾಗವಹಿಸುವಿಕೆ ಎಲ್ಲವೂ ಶ್ರೀದೇವಿ ಅವರಿಗೆ ಐವತ್ತರ ಹರೆಯ ಅನ್ನಿಸಲೇ ಇಲ್ಲ ಎಂದು ಅಲ್ಲಿನ ಮಂದಿ ಆಶ್ಚರ್ಯ ಪಟ್ಟಿದ್ದಾರೆ. ಬಾಹುಬಲಿಯಲ್ಲಿ ರಮ್ಯಕೃಷ್ಣ ರಾಜಮಾತೆಯಾಗಿದ್ದರೆ, ಶ್ರೀದೇವಿ  ಪುಲಿ ಚಿತ್ರದಲ್ಲಿ ರಾಜಮಾತೆ  ಪಾತ್ರಧಾರಿಯಾಗಿದ್ದಾರೆ. ವಯಸ್ಸಿದ್ದಾಗ ಇವರಿಬ್ಬರಲ್ಲಿ ಸ್ಪರ್ಧೆ ಇದ್ದಂತೆ ಮಧ್ಯವಯಸ್ಕರಾದ ಬಳಿಕವೂ ಈ ಜೋಡಿ ನಡುವೆ ಸ್ಫರ್ಧೆ ಏರ್ಪಟ್ಟಿರುವುದಕ್ಕೆ ಆಶ್ಚರ್ಯ ಚಕಿತರಾಗಿದ್ದಾರೆ ಸಿನಿಮಂದಿ. 

ವೆಬ್ದುನಿಯಾವನ್ನು ಓದಿ