ಹೌದು... ರಾಣಿ ಪದ್ಮಾವತಿ ಸಿನಿಮಾದ ಹಾಡೊಂದರ ರೆಕಾರ್ಡಿಂಗ್ ಈಗಾಗಲೇ ಕಂಪ್ಲೀಟ್ ಆಗಿದೆಯಂತೆ. ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಅವರು ಸಿನಿಮಾದ ಹಾಡೊಂದನ್ನು ಹಾಡಿದ್ದಾರೆ. ಈ ಹಿಂದೆ ರಿಲೀಸ್ ಆದ ಬನ್ಸಾಲಿ ಅವರ ಬಾಜೀರಾವ್ ಮಸ್ತಾನಿ ಸಿನಿಮಾದ ಹಾಡುಗಳು ಹಾಗೇ ರಾಮ್ ಲೀಲಾ ಸಿನಿಮಾದ ಹಾಡುಗಳು ತುಂಬಾನೇ ಹಿಟ್ ಆಗಿದ್ದವು. ಇದೀಗ ರಾಣಿ ಪದ್ಮಾವತಿ ಸಿನಿಮಾದ ಹಾಡುಗಳ ಬಗ್ಗೆಯೂ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಗಳಿವೆ. ಅದರಂತೆ ಸಿನಿಮಾದ ಮೊದಲ ಹಾಡನ್ನು ಸಂಜಯ್ ಲೀಲಾ ಬನ್ಸಾಲಿ ಅವರ ಫೇವರೇಟ್ ಗಾಯಕಿ ಶ್ರೇಯಾ ಘೋಷಾಲ್ ಅವರು ಹಾಡಿ ಮುಗಿಸಿದ್ದಾರಂತೆ.