ದ್ವಿಪಾತ್ರದಲ್ಲಿ ಶೃತಿ ಹಾಸನ್ ಅಭಿನಯ ?!

ಶನಿವಾರ, 4 ಜುಲೈ 2015 (10:08 IST)
ಇಲ್ಲ ಬಿಡಿ ಅಂತಹ ಯಾವ ಅವಕಾಶಗಳು ಶೃತಿ ಹಾಸನ್ ಅವರನ್ನು ಹುಡುಕಿಕೊಂಡು ಬಂದಿಲ್ಲ. ಈಗ ನಾವು ಹೇಳ ಹೊರಟಿರುವುದು  ಬೇರೆ ಸಂಗತಿ ಬಗ್ಗೆ. ಈ ಸುಂದರ ಡಿ-ಡೇ ನಟಿ ಈಗ ಎಫ್.ಹೆಚ್.ಎಂ(FHM) ಪತ್ರಿಕೆಯಲ್ಲಿ ಜುಲೈ ತಿಂಗಳ ಸಂಚಿಕೆಯಲ್ಲಿ ಮುಖಪುಟಧಾರಿಯಾಗಿದ್ದಾರೆ. 
ಫ್ಲಿಪ್ ಸೈಡ್ ಎನ್ನುವ ಉಪಶೀರ್ಷಿಕೆ ಹೊಂದಿರುವ ಈ ಸಂಚಿಕೆಯಲ್ಲಿ ಶ್ರುತಿ ಹಾಸನ್ ಅವರು ಕಪ್ಪು ಹಾಗೂ ಬಿಳಿ ಡ್ರೆಸ್ ಮೂಲಕ ಎಲ್ಲರ ಗಮನ ಸೆಳೆಯುವಂತಿದ್ದಾರೆ.  ಈಗ ಶ್ರುತಿ ವೆಲ್ ಕಂ ಬ್ಯಾಕ್ ಚಿತ್ರದಲ್ಲಿ ಜಾನ್ ಅಬ್ರಹಾಂ ಜೊತೆ, ರಾಕಿ ಹ್ಯಾಂಡ್ಸಂ ಮತ್ತು ಯಾರ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಅವರು ಕಾಲಿವುಡ್ ನಲ್ಲಿ ವಿಜಯ್ ಜೊತೆ ಪುಲಿ ಚಿತ್ರದಲ್ಲೂ ಸಹಿತ ನಟಿಸುತ್ತಿದ್ದಾರೆ. ಇದರಲ್ಲಿ ಶ್ರೀದೇವಿ ಸಹ ಮುಖ್ಯ ಪಾತ್ರಧಾರಿಯಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ