ಹುಟ್ಟುಹಬ್ಬದ ಸಂಭ್ರಮದಲ್ಲಿ ಶೃತಿ ಹಾಸನ್

ಬುಧವಾರ, 28 ಜನವರಿ 2015 (10:37 IST)
ಈಗ ಬಾಲಿವುಡ್, ಕಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ಬೇಡಿಕೆಯ ನಟಿಯಾಗಿರುವ ಶ್ರುತಿ ಹಾಸನ್ ಜನ್ಮದಿನ ಇಂದು. ಆಕೆಯ ತಾರ ಬದುಕು ಮತ್ತಷ್ಟು ಉಜ್ವಲವಾಗಲಿ ಎಂದು ಹಾರೈಸುತ್ತಾ ಈಗ ಮುಂದಿನ ಸಂಗತಿ ಬಗ್ಗೆ ತಿಳಿಸುತ್ತೇವೆ. ಶ್ರುತಿ ಹಾಸನ್ ಹುಟ್ಟು ಹಬ್ಬವನ್ನು ಭಿನ್ನ ರೀತಿಯಲ್ಲಿ ಮಾಡಿಕೊಳ್ಳುವ ಆಶಯ ಹೊಂದಿದ್ದಾಳೆ. ಆಕೆಯು ತನ್ನ ಅಭಿಮಾನಿಗಳಿಗಾಗಿ ಒಳ್ಳೆಯ ಕಾಣಿಕೆ ನೀಡಲು ಸಿದ್ಧ ಆಗಿದ್ದಾಳೆ ತನ್ನ ಹುಟ್ಟು ಹಬ್ಬದ ಸಲುವಾಗಿ! ಅಂದು ಸೋಶಿಯಲ್ ನೆಟ್‌ವರ್ಕ್ ಪ್ಲಾಟ್‌ಫಾರ್ಮ್ ಮೇಲೆ ಅಭಿಮಾನಿಗಳು ತನ್ನೂಂದಿಗೆ ಬೆರೆಯುವ ಅವಕಾಶ ನೀಡುತ್ತಿದ್ದಾಳೆ ಈ ಚೆಲುವೆ. 
ಈ ವರೆಗೂ ತನ್ನ ಬದುಕಲ್ಲಿ ಮಾಡಿದ ಒಳ್ಳೆಯ ಕೆಲಸಗಳು, ಬದುಕಿನ ವಿವರಗಳು, ಅವುಗಳ ಅನ್ವಯ  ತೆಗೆ ಫೋಟೋಗಳು, ಇವೆಲ್ಲವನ್ನೂ ಆಕೆಯ ಅಕೌಂಟ್ ಗೆ ಪೋಸ್ಟ್ ಮಾಡಿ ಎಂದು ಕೇಳಿದ್ದಾಳೆ ಆಕೆ ತನ್ನ ಅಭಿಮಾನಿಗಳ ಬಳಿಯಲ್ಲಿ! ಬೇರೆಯವರ ಬದುಕಲ್ಲಿ  ಒಳ್ಳೆಯದನ್ನು ಮಾಡುವ ಕೆಲಸದಲ್ಲಿ ಶ್ರುತಿ ಸದಾ ನಿರತಳಾಗಿರುತ್ತಾಳೆ.ಆದ್ದರಿಂದ ತನ್ನ ಅಮೂಲ್ಯವಾದ ಸಮಯವನ್ನು ಅಭಿಮಾನಿಗಳ ಜೊತೆ ಕಳೆಯುವ  ಆಶಯ ಹೊಂದಿದ್ದಾಳೆ.    
 
ಒಟ್ಟಾರೆ ಬಂದ ಎಂಟ್ರಿಯಲ್ಲಿ ತನಗೆ ತುಂಬಾ ಇಷ್ಟವಾದ ಐದು ಜನರನ್ನು ಆಕೆ ಆಯ್ಕೆ ಮಾಡಿಕೊಳ್ಳುತ್ತಾಳಂತೆ. ಅವರಿಗೆ ತನ್ನ ಹಸ್ತಾಕ್ಷರದಿಂದ ಇರುವ ಕಾಣಿಕೆಯನ್ನು , ವಿಶೇಷ ಸಂದೇಶವನ್ನು ನೀಡುವುದಾಗಿ ತಿಳಿದು ಬಂದಿದೆ. ಅದು ಆಕೆಯ ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದೆ. ಪ್ರಸ್ತುತ ಆಕೆ ರಾಕಿ ಹ್ಯಾಂಡ್ಸಂ, ವೆಲ್ ಕಂ ಬ್ಯಾಕ್,  ಗಬ್ಬರ್ , ಯಾರಾ ಮುಂತಾದ ಸಿನಿಮಾಗಳಲ್ಲಿ ಮತ್ತು ಈಗ ಮಹೇಶ್ ಬಾಬು ಅವರ ಸಿನಿಮಾದಲ್ಲಿ ಸಹಿತ ಅವಕಾಶ ಪಡೆದಿದ್ದಾಳೆ. 

ವೆಬ್ದುನಿಯಾವನ್ನು ಓದಿ