ಗಂಡು ಮಗುವಿಗೆ ತಾಯಿಯಾದ ನಟಿ ಶ್ವೇತಾ ಚಂಗಪ್ಪ

ಮಂಗಳವಾರ, 10 ಸೆಪ್ಟಂಬರ್ 2019 (17:12 IST)
ಬೆಂಗಳೂರು: ಕಿರುತೆರೆಯ ಖ್ಯಾತಿ ನಟಿ ಶ್ವೇತಾ ಚಂಗಪ್ಪಗೆ ಗಂಡು ಮಗುವಿನ ತಾಯಿಯಾಗಿದ್ದಾರೆ. ಈ ಖುಷಿ ವಿಚಾರವನ್ನು ಅವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ.


ಶ್ವೇತಾ ಚಂಗಪ್ಪ ಮತ್ತು ಕಿರಣ್ ಅಪ್ಪಚ್ಚು ದಂಪತಿ ಖುಷಿ ವಿಚಾರವನ್ನು ಹಂಚಿಕೊಂಡಿದ್ದು ‘ನಾವೀಗ ಮೂವರಾಗಿದ್ದೇವೆ. ನಮ್ಮ ತಂದೆ, ತಾಯಿ, ಕುಟುಂಬದವರು ಮತ್ತು ಸ್ನೇಹಿತರು ಹಾಗೂ ನಿಮ್ಮೆಲ್ಲರ ಹಾರೈಕೆಯಿಂದ ನಾನು ಮತ್ತು ಕಿರಣ್ ಗಂಡು ಮಗುವಿನ ತಂದೆ-ತಾಯಿಯಾಗಿದ್ದೇವೆ’ ಎಂದು ಶ್ವೇತಾ ಬರೆದುಕೊಂಡಿದ್ದಾರೆ. ಖುಷಿ ವಿಚಾರ ಹಂಚಿಕೊಂಡ ಶ್ವೇತಾ ಚಂಗಪ್ಪ ದಂಪತಿಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ