ಸ್ಪರುದ್ರೂಪಿ ನಟ ರಮೇಶ್ ಅರವಿಂದ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್

ಮಂಗಳವಾರ, 10 ಸೆಪ್ಟಂಬರ್ 2019 (09:07 IST)
ಬೆಂಗಳೂರು: ಬಹುಮುಖ ಪ್ರತಿಭೆ ರಮೇಶ್ ಅರವಿಂದ್ ಗೆ ಇಂದು ಜನ್ಮ ದಿನದ ಸಂಭ್ರಮ. ಈ ಬಾರಿ ರಮೇಶ್ ಜನ್ಮದಿನಕ್ಕೆ ಅವರ ಅಭಿಮಾನಿಗಳಿಗೆ ಭರ್ಜರಿ ಗಿಫ್ಡ್ ಸಿಗುತ್ತಿದೆ.


ಎಲ್ಲರಿಗೂ ಗೊತ್ತಿರುವಂತೆ ರಮೇಶ್ ಅರವಿಂದ್ ಶಿವಾಜಿ ಸುರತ್ಕಲ್ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ರಮೇಶ್ ಅರವಿಂದ್ ಗೆ 101 ನೇ ಸಿನಿಮಾವಾಗಲಿದೆ.

ಇದುವರೆಗೆ ಒಬ್ಬ ನಟನಾಗಿ ಮಾತ್ರವಲ್ಲದೆ, ನಿರ್ದೇಶಕನಾಗಿ, ಬರಹಗಾರನಾಗಿಯೂ ಚಿರಪರಿಚಿತರಾಗಿದ್ದಾರೆ. ಇಂದು ರಮೇಶ್ ಅರವಿಂದ್ ಜನ್ಮದಿನವಾಗಿದ್ದು, ಶಿವಾಜಿ ಸುರತ್ಕಲ್ ಸಿನಿಮಾದ ಟೀಸರ್ ಬಿಡುಗಡೆಯಾಗುತ್ತಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ರಮೇಶ್ ಜನ್ಮದಿನಕ್ಕೆ ಅವರ ಅಭಿಮಾನಿಗಳಿಗೆ ಟ್ರೀಟ್ ಆಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ