ನಿನ್ನೆಯಷ್ಟೇ ಬರ್ತ್ ಡೇ ಆಚರಿಸಿದ್ದ ಸ್ಯಾಂಡಲ್ ವುಡ್ ನಟ ಸಿದ್ಧರಾಜು ಇಂದು ವಿಧಿವಶ

ಮಂಗಳವಾರ, 8 ಸೆಪ್ಟಂಬರ್ 2020 (12:18 IST)
ಬೆಂಗಳೂರು: ಸ್ಯಾಂಡಲ್ ವುಡ್, ಕಿರುತೆರೆಯಲ್ಲಿ ಪೋಷಕ ಪಾತ್ರಧಾರಿಯಾಗಿ ಮಿಂಚಿದ್ದ ಹಿರಿಯ ನಟ ಸಿದ್ದರಾಜು ಕಲ್ಯಾಣ್ಕರ್ ವಿಧಿವಶರಾಗಿದ್ದಾರೆ.


ನಿನ್ನೆಯಷ್ಟೇ 60 ವರ್ಷದ ಹುಟ್ಟು ಹಬ್ಬ ಸಂಭ್ರಮಾಚರಿಸಿದ್ದ ಸಿದ್ಧರಾಜು ತಡರಾತ್ರಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ರಂಗಭೂಮಿ ಮೂಲಕ ಕಿರುತೆರೆ, ಹಿರಿತೆರೆಗೆ ಪದಾರ್ಪಣೆ ಮಾಡಿದ್ದ ಸಿದ್ಧರಾಜು ಇದುವರೆಗೆ ಅನೇಕ ಸಿನಿಮಾ, ಧಾರವಾಹಿಗಳಲ್ಲಿ ನಟಿಸಿದ್ದಾರೆ. ಅವರ ನಿಧನಕ್ಕೆ ಸ್ಯಾಂಡಲ್ ವುಡ್ ಕಲಾವಿದರು ಕಂಬನಿ ಮಿಡಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ