ದ್ವಂದ್ವಾರ್ಥ, ಕೀಳು ಅಭಿರುಚಿ ಚಿತ್ರಗಳ ಬಗ್ಗೆ ಸಿಎಂ ಅಸಮಾಧಾನ

ಶುಕ್ರವಾರ, 3 ಫೆಬ್ರವರಿ 2017 (16:04 IST)
ಕನ್ನಡ ಚಲನಚಿತ್ರರಂಗಕ್ಕೆ ಸಕಲ ಸಹಾಯವನ್ನು ಮಾಡಲು ಸರಕಾರ ಸಿದ್ದವಿದ್ದು ಚಿತ್ರರಂಗ ಸಹ ಉತ್ತಮ ಸಂದೇಶವುಳ್ಳ ಚಿತ್ರಗಳನ್ನು ತಯಾರಿಸುವ ಜವಾಬ್ದಾರಿ ಮೆರೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ವಿಧಾನಸೌಧದ ಮುಂಬಾಗದ ಮೆಟ್ಟಿಲುಗಳ ಮೇಲೆ ಹಮ್ಮಿಕೊಂಡಿದ್ದ 9ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವವನ್ನು ಉದ್ಘಾಟಿಸಿ ಮಾತಾನಾಡುತ್ತಿದ್ದರು.
 
ಇತ್ತೀಚಿಗೆ ಚಲನಚಿತ್ರಗಳ ಗುಣಮಟ್ಟ ಅಷ್ಟೊಂದು ಚೆನ್ನಾಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿ ದ್ವಂದ್ವಾರ್ಥದ ಮಾತುಗಳು ಮನರಂಜನೆಯಾಗಿದೆ, ಅದೊಂದು ಕೀಳು ಅಭಿರುಚಿ, ಚಲನಚಿತ್ರರಂಗ ಉತ್ತಮ ಸಂದೇಶಗಳುಳ್ಳ ಚಿತ್ರಗಳನ್ನು ತಯಾರಿಸಬೇಕು ಎಂದರು.
 
ಕನ್ನಡ ಸಿನಿಮಾಕ್ಕೆ ಸರಕಾರದ ಬೆಂಬಲ ಸದಾ ಇದ್ದೆ ಇರುತ್ತದೆ, ಕಲಾರಸಿಕರಾದ ಅಭಿಮಾನಿಗಳು ಕನ್ನಡ ಚಿತ್ರಗಳನ್ನು ನೋಡುವ ಜವಬ್ಧಾರಿಯನ್ನು ಮರೆಯಬಾರದು, ಪ್ರೇಕ್ಷಕನಾಗಿ ಎಲ್ಲಾ ಭಾಷೆಗಳ ಸಿನಿಮಾ ನೋಡಿ ಮತ್ತು ಕನ್ನಡದ ಬಗ್ಗೆ ಅಭಿಮಾನವಿರಲಿ.
 
ಜಗತ್ತಿನಲ್ಲಿ ಎರಡು ನಗರಗಳಲ್ಲಿ ನಡೆಯುವ ಏಕೈಕ ಅಂತರರಾಷ್ಟ್ರೀಯ ಸಿನಿಮೋತ್ಸವ ನಮ್ಮ ಬೆಂಗಳೂರಿನದ್ದು, ಕನ್ನಡ ಚಿತ್ರರಂಗಕ್ಕೆ ಮೈಸೂರಿನ ಕೊಡುಗೆ ಅಪಾರ ಎಂದು ಸ್ಮರಿಸಿಕೊಂಡರು. ಕರ್ನಾಟಕದಲ್ಲಿ ಕನ್ನಡವೆ ಮೊದಲು, ಶೀಘ್ರದಲ್ಲಿ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳ ವಿಷಯ ಕುರಿತು ಚಿತ್ರರಂಗದ ಸಭೆ ಕರೆಯುವದಾಗಿ ತಿಳಿಸಿದರು.
 
ಪರವಾನಗಿ ಸರಳವಾಗಲಿ: ಪ್ರಾಸ್ತಾವಿಕವಾಗಿ ಮಾತನಾಡಿದ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರು ಥಿಯೇಟರ್ ಪ್ರಾರಂಭಕ್ಕೆ ಪರವಾನಿಗೆ ನೀಡುವ ಕ್ರಿಯೆಯನ್ನು ಸರಳೀಕರಿಸಬೇಕು ಹಾಗೂ ಬೇಗನೆ ಸಿಗುವಂತಾಗಲು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿ ಮಲ್ಟಿಪ್ಲೆಕ್ಸ್ ಥಿಯೇಟರ್ ಗಳ ಟಿಕೆಟ್ ಧರವನ್ನು ಕಡಿತಗೊಳಿಸಿ ಜನಸಾಮಾನ್ಯರಿಗೂ ಸಹಾಯವಾಗುವಂತೆ ಮಾಡಿ ಹಾಗೂ ಮೈಸೂರಿನಲ್ಲಿ ಕನ್ನಡ ಚಲನಚಿತ್ರರಂಗದ ಕಾಲೋನಿಗಾಗಿ ಮನವಿ ಸಲ್ಲುಸಿದರು.
 
ಲೇಸರ್ ಶೋ:  ವಿಧಾನಸೌಧದ ಭವ್ಯ ಹಿನ್ನಲೆಯಲ್ಲಿ ಕನ್ನಡ ಚಿತ್ರೋದ್ಯಮ ಇತಿಹಾಸ ಹಾಗೂ ಕಲೆ,ಸಂಸ್ಕೃತಿ ಚಿತ್ರ ಮೂಡಿಸುವ ವಿಡಿಯೋ ಮ್ಯಾಪಿಂಗ್ ಪ್ರದರ್ಶನ ನೆರೆದಿದ್ದವರ ಕಣ್ಮನ ಸೆಳೆಯಿತು. ಚಿತ್ರೋತ್ಸವ ಉದ್ಘಾಟನೆಯ ನಂತರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ನಿರ್ದೇಶಕ ಮಹಮದ್ ಹಮಿದಿ ನಿರ್ದೇಶನದ ಲಾ ವಾಛೆ (ಮನುಷ್ಯ ಮತ್ತು ಆತನ ಹಸು) ಸಿನಿಮಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.
 
ಬಹುಭಾಷಾ ನಟರಾದ ರಮೇಶ್ ಅರವಿಂದ ಮತ್ತು ಶ್ರೀಮತಿ ಸುಹಾಸಿನಿ ಅವರ ನಿರೂಪಣೆ ಕಾರ್ಯಕ್ರಮಕ್ಕೊಂದು ಮೆರಗು ತಂಬಿತ್ತು. ವಿಶೇಷ ಆಹ್ವಾನಿತರಾಗಿ ನಟ ಪುನೀತ್ ರಾಜ್ ಕುಮಾರ್ ಹಾಗೂ ಈಜಿಪ್ಟ್ ನ ಖ್ಯಾತ ಚಲನಚಿತ್ರ ನಿರ್ದೇಶಕರಾದ ಶ್ರೀಮತಿ ಹಲಾ ಕಲೀಲ್ ಅವರು ಆಗಮಿಸಿದ್ದರು, ಇದೇ ಸಮಯದಲ್ಲಿ ಈ ಸಾಲಿನ ಸಿನಿಮೋತ್ಸವದ ಸ್ಮರಣ ಸಂಚಿಕೆಯನ್ನು ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಬಿಡುಗಡೆ ಮಾಡಿದರು.
 
ವಿಡಿಯೋ ಮ್ಯಾಪಿಂಗ್: ವಿಧಾನಸೌಧದ ಭವ್ಯ ಹಿನ್ನಲೆಯಲ್ಲಿ ಕನ್ನಡ ಚಿತ್ರೋದ್ಯಮ ಇತಿಹಾಸ ಹಾಗೂ ಕಲೆ,ಸಂಸ್ಕೃತಿ ಚಿತ್ರ ಮೂಡಿಸುವ ವಿಡಿಯೋ ಮ್ಯಾಪಿಂಗ್ ಪ್ರದರ್ಶನ ನೆರೆದಿದ್ದವರ ಕಣ್ಮನ ಸೆಳೆಯಿತು. ಚಿತ್ರೋತ್ಸವ ಉದ್ಘಾಟನೆಯ ನಂತರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ನಿರ್ದೇಶಕ ಮಹಮದ್ ಹಮಿದಿ ನಿರ್ದೇಶನದ ಲಾ ವಾಛೆ (ಮನುಷ್ಯ ಮತ್ತು ಆತನ ಹಸು) ಸಿನಿಮಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.
 
ಮುಖ್ಯ ಅತಿಥಿಗಳಾಗಿ ಸಚಿವರುಗಳಾದ ಕೆ.ಜೆ.ಜಾರ್ಜ್ ಹಾಗೂ ಉಮಾಶ್ರಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರಸಿಂಗ್ ಬಾಬು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕರಾದ ಎನ್.ಆರ್.ವಿಶುಕುಮಾರ್ ಅವರು ಮತ್ತು ಚಲನಚಿತ್ರ ರಂಗದ ಅನೇಕ ಗಣ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ