ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ ಹಾಕಿದ್ದ ಮೂವರು ಅರೆಸ್ಟ್

Krishnaveni K

ಶನಿವಾರ, 2 ಆಗಸ್ಟ್ 2025 (10:14 IST)
ಬೆಂಗಳೂರು: ನಟಿ ರಮ್ಯಾಗೆ ಡಿ ಬಾಸ್ ಅಭಿಮಾನಿ ಎಂದು ಹೇಳಿಕೊಂಡು ಅಶ್ಲೀಲ ಕಾಮೆಂಟ್ ಹಾಕಿದ್ದ ಮೂವರನ್ನು ಪೊಲೀಸರು ಈಗ ಅರೆಸ್ಟ್ ಮಾಡಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ಕಾಮೆಂಟ್ ಮಾಡಿದ್ದಕ್ಕೆ ನಟಿ ರಮ್ಯಾಗೆ ಸೋಷಿಯಲ್ ಮೀಡಿಯಾದಲ್ಲಿ ಡಿಬಾಸ್ ಫ್ಯಾನ್ಸ್ ಎಂದು ಹೇಳಿಕೊಂಡು ಅನೇಕರು ಅಶ್ಲೀಲವಾಗಿ ಕಾಮೆಂಟ್ ಹಾಕಿದ್ದರು. ಅವರ ಕಾಮೆಂಟ್ ಗಳಿಂದ ಸಿಟ್ಟಿಗೆದ್ದ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಲ್ಲದೆ ಸುಮಾರು 43 ಖಾತೆಗಳ ವಿರುದ್ಧ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದರು.

ಇದರ ಬೆನ್ನಲ್ಲೇ ಪೊಲೀಸರು ಆ ಖಾತೆಗಳ ವಿರುದ್ಧ ಎಫ್ಐಆರ್ ದಾಖಲಿಸಿ ವಿಚಾರಣೆ ಶುರು ಮಾಡಿದ್ದರು. ಇದೀಗ ಘಟನೆ ಸಂಬಂಧ ಮೂವರನ್ನು ಅರೆಸ್ಟ್ ಮಾಡಲಾಗಿದೆ. ಕೋಲಾರ, ಚಿತ್ರದುರ್ಗ ಮೂಲದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇವರ ಖಾತೆಯ ಐಪಿ ಅಡ್ರೆಸ್ ಬಳಸಿ ಪತ್ತೆ ಮಾಡಿದ್ದಾರೆ. ಇನ್ನು ಕೆಲವು ಖಾತೆಗಳು ದೂರು ದಾಖಲಾಗುತ್ತಿದ್ದಂತೇ ಡಿಲೀಟ್ ಆಗಿತ್ತು. ಹೀಗಾಗಿ ಅವುಗಳ ವಿವರಗಳಿಗಾಗಿ ಪೊಲೀಸರು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದ್ದರು. ಇದೀಗ ಆ ಖಾತೆಗಳ ವಿವರವೂ ಪೊಲೀಸರಿಗೆ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ