ಸಿದ್ಧು ಜೊತೆ ಹನ್ಸಿಕ ಇಷ್ಕ್ ...ಈಗ ಅವರಿಬ್ಬರೂ ಅದರಲ್ಲಿ ಬ್ಯುಸಿಯಂತೆ!

ಸೋಮವಾರ, 20 ಅಕ್ಟೋಬರ್ 2014 (13:47 IST)
ಸಾಮಾನ್ಯವಾಗಿ ಒಂದು ಭಾಷೆಯ ಸಿನಿಮಾವನ್ನು  ಮತ್ತೊಂದು ಭಾಷೆಯಲ್ಲಿ ರೀಮೇಕ್ ಮಾಡೋದು ಇದ್ದೆ ಇರುತ್ತದೆ. ಆದರೆ ಕೆಲವು  ಭಾಷೆಗಳ ಚಿತ್ರಗಳು ಹೆಚ್ಚಾಗಿ ರೀಮೇಕ್ ಆಗುತ್ತದೆ. ಅದರಲ್ಲಿ ತಮಿಳು ಭಾಷೆಯ ಸಿನಿಮಾಗಳು ಹೆಚ್ಚಾಗಿ ತೆಲುಗಲ್ಲಿ ಬಿಡುಗಡೆ ಆಗುತ್ತದೆ, 
 
ಅಪರೂಪಕ್ಕೆ ತೆಲುಗು ಚಿತ್ರಗಳನ್ನು ತಮಿಳಿಗೆ ತರುತ್ತಾರೆ ಮಂದಿ. ಆ ಪಟ್ಟಿಗೆ ತೆಲುಗಿನ ಇಷ್ಕ್ ಚಿತ್ರ ಸೇರ್ಪಡೆ ಆಗಿದೆ. 2012  ಬಿಡುಗಡೆ ಆದ ಚಿತ್ರ ಇಷ್ಕ್. ಈ ಚಿತ್ರದಲ್ಲಿ ಟಾಲಿವುಡ್ ನಟ ನಿತಿನ್ ತಾರಾ ಬದುಕಲ್ಲಿ ಸಾಕಷ್ಟು ಬದಲಾಯಿತು. ಆ ಸಿನಿಮಾ ಈಗ ತಮಿಳಿಗೆ   ರೀಮೇಕ್ ಆಗುತ್ತಿದೆ. ಇದರಲ್ಲಿ ತಮಿಳಿನ ಸ್ಟಾರ್  ಹೀರೋಯಿನ್  ಹೊಸ ಹೀರೋ ಜತೆ ಅಭಿನಯಿಸುತ್ತಿದ್ದಾಳೆ. 
 
ಈ ಚಿತ್ರವೂ ಉಯಿರ್ ಎನ್ನುವ ಹೆಸರಿನಿಂದ ತೆರೆ ಏರುತ್ತಿದೆ. ಇದನ್ನು ರಾಜ ಶೇಖರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ತೆಲುಗು ಚಿತ್ರದ ನಿರ್ದೇಶಕ ವಿಶಾಲ್. ತಮಿಳಿನಲ್ಲಿ  ರಾಜಶೇಖರ್ ನಿರ್ದೇಶನ ಮಾಡುತ್ತಿದ್ದಾರೆ. ರಾಜ್ ಅವರಿಗೆ ಮಾಸ್ ನಿರ್ದೇಶಕ ಎನ್ನುವ ಅಗ್ಗಳಿಕೆ ಇದೆ.  
 
ಈ ಚಿತ್ರದಲ್ಲಿ ಮುಖ್ಯ ಪಾತ್ರಧಾರಿಯಾಗಿದ್ದಾಳೆ ಹನ್ಸಿಕ ಮೋಟ್ವಾನಿ. ಹೊಸ ಹೀರೋ ಸಿದ್ಧಾರ್ಥ್ ಈ ಚಿತ್ರದಲ್ಲಿ ತಮ್ಮ ತಾರ ಬದುಕನ್ನು ಬದಲಾಯಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಸಿದ್ಧು  ಪ್ರಸಿದ್ಧ ನಟಿ ಜಯಪ್ರದ ಮಗ. ನಿತಿನ್ ಹಾಗೂ ನಿತ್ಯ ತೆಲುಗು ಚಿತ್ರದಲ್ಲಿ ನಟಿಸಿದ್ದರು. ಈಗ ತಮಿಳಿನಲ್ಲಿ  ಈ ಜೋಡಿ ಎಂತಹ ಮೋಡಿಮಾಡುತ್ತದೆಯೋ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.ಆದರೆ ಈ ಕುತೂಹಲ ತಣಿಸಲು ಸಮಯ ಇದೆ!
 

ವೆಬ್ದುನಿಯಾವನ್ನು ಓದಿ