ಸಿಂಬು ನಯನತಾರ ಜಸ್ಟ್ ಫ್ರೆಂಡ್ಸ್ .. ಅಷ್ಟೇ ..ಅಷ್ಟೇ.. ಅವರಿಬ್ಬರ ನಡುವೆ ಬೇರೇನೂ ಇಲ್ಲ!!!

ಸೋಮವಾರ, 20 ಅಕ್ಟೋಬರ್ 2014 (13:45 IST)
ತಮಿಳು ಸ್ಟಾರ್ ಗಳಾದ ಸಿಂಬು ಮತ್ತು ನಯನತಾರ  ಅವರು ಮತ್ತೆ ಡೇಟಿಂಗ್ ಆರಂಭ ಮಾಡಿದ್ದಾರೆ. ಹಾಗಂತ ಸಣ್ಣ ಎಳೆಯ ಸುದ್ದಿ ಹರಡಿದೆ.ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ಅವರ ಜೊತೆ ಸೂಪರ್ ಚಿತ್ರದಲ್ಲಿ ನಟಿಸಿದ್ದ  ನಯನತಾರ ತನ್ನ ಜೀವನದಲ್ಲಿ ಹೆಚ್ಚು ಪ್ರೀತಿಸಿದ್ದು ಸಿಂಬು ಅವರನ್ನು. 
 
ಅದಾದ ಬಳಿಕ ಪ್ರಭುದೇವ ಅವರ ಜೊತೆ ಲವ್ ಮಾಡಿ ಅಲ್ಲೂ ಸಹಿತ ಫೆಯಿಲೂರ್ ಆಗಿತ್ತು.  ಸಾಕಷ್ಟು ವರ್ಷಗಳ ಹಿಂದೆ ಸಿಂಬು ಜೊತೆಗಿನ ಪ್ರೀತಿ ಒಡೆದಿತ್ತು. ಅದಾದ ಬಳಿಕ ಇತ್ತೀಚಿನವರೆಗೂ ಅವರಿಬ್ಬರೂ ಯಾವ ಚಿತ್ರದಲ್ಲೂ ಕಂಡಿರಲಿಲ್ಲ. ಆದರೆ ಈಗ ಒಂದು ಚಿತ್ರದಲ್ಲಿ ಒಟ್ಟಿಗೆ ಆಕ್ಟ್ ಮಾಡುತ್ತಿದ್ದಾರೆ. 
 
ಆದಷ್ಟು ಅವರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರಲಿಲ್ಲ ಒಟ್ಟಿಗೆ. ಆದರೆ ಈಗ ಬಂದಿರುವ ಸುದ್ದಿ ಪ್ರಕಾರ ಈ ಜೋಡಿ ಮತ್ತೆ ಒಂದಾಗಿದ್ದಾರೆ, ಒಟ್ಟಿಗೆ  ಎಲ್ಲರ ಮುಂದೆ ಬರುತ್ತಿದ್ದಾರೆ, ಕಾಣಿಸುತ್ತಿದ್ದಾರೆ ಮತ್ತು ಸುದ್ದಿಯಾಗುತ್ತಿದ್ದಾರೆ. 
 
ನಯನತಾರ ಈಗ ಸಿಂಬು ಜೊತೆ ಇದು ನಮ್ಮ ಆಳು ಎನ್ನುವ ಚಿತ್ರದಲ್ಲಿ ಮತ್ತೆ ಒಟ್ಟಿಗೆ ಅಭಿನಯಿಸುತ್ತಿರುವ ಈ ಜೋಡಿ 
 
ತೆರೆಯ ಮುಂದೆ ಕ್ಯಾಮರ ಮುಂದೆ ಮಾತ್ರವಲ್ಲ ಕ್ಯಾಮರ ಹಿಂದೆ ಸಹಿತ  ಪ್ರಣಯ  ಹಕ್ಕಿಗಳಾಗಿದ್ದಾರೆ. ನಯನತಾರ ಮತ್ತು ಧನುಷ್ ಅವರು ಒಟ್ಟಾಗಿ ನಟಿಸಿರುವ ಚಿತ್ರದ ಪ್ರೀಮಿಯರ್ ಷೋ ಸಮಯದಲ್ಲಿ ಸಹ ಸಿಂಬು ಭಾಗವಹಿಸಿದ್ದು ಕಾಲಿವುಡ್ ಮಂದಿಯ ಮಾತಿಗೆ ಗ್ರಾಸವಾಗಿದೆ. ಈ ಮಾಜಿ ಪ್ರೇಮಿಗಳು ಮತ್ತೊಮ್ಮೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎನ್ನುವುದು ಈಗ ಸ್ಪಷ್ಟವಾಗಿ ಕಾಣುತ್ತಿದೆ. ಆದರೆ ಸಿಂಬು ಹೇಳೋದಿಷ್ಟೇ ಆಕೆ ನನ್ನ ಸಹ ಕಲಾವಿದೆ.. ನಾವಿಬ್ಬರು ಜಸ್ಟ್ ಫ್ರೆಂಡ್ ಅಷ್ಟೇ ..! ಹೌದಾ ?!
 

ವೆಬ್ದುನಿಯಾವನ್ನು ಓದಿ