ಈ ಸಿನಿಮಾದಲ್ಲಿ ಅಂಕಿತಾರದ್ದು ವಿಭಿನ್ನ ಪಾತ್ರವಾಗಿದೆ. ಸಿನಿಮಾದ ಟ್ರೈಲರ್ ನಿನ್ನೆ ಬಿಡುಗಡೆಯಾಗಿದೆ. ಟ್ರೈಲರ್ ಲಾಂಚ್ ವೇಳೆ ರಕ್ಷಿತ್ ಶೆಟ್ಟಿ ಅಂಕಿತಾ ಅಭಿನಯವನ್ನು ಭರಪೂರ ಕೊಂಡಾಡಿದ್ದಾರೆ. ಈ ಸಿನಿಮಾ ನೋಡಿದ ಬಳಿಕ ಅಂಕಿತಾಗೆ ಕರೆ ಮಾಡಿ ಆಕೆಯ ಅಭಿನಯವನ್ನು ಕೊಂಡಾಡಿದೆ. ಯಾಕೆಂದರೆ ಅಷ್ಟು ಅದ್ಭುತವಾಗಿ ಅಭಿನಯಿಸಿದ್ದಾರೆ. ಅವರ ಅಭಿನಯ ನೋಡುತ್ತಿದ್ದರೆ ಈ ವರ್ಷದ ಅತ್ಯುತ್ತಮ ನಟಿ ಪ್ರಶಸ್ತಿ ಅವರಿಗೇ ಸಿಗಬೇಕು ಎಂದಿದ್ದಾರೆ.
ಅಂಕಿತಾ ಪಾತ್ರ ಮಾಡುವುದು ಅಷ್ಟು ಸುಲಭವಲ್ಲ. ಆದರೆ ಆಕೆ ಅಷ್ಟು ಅದ್ಭುತವಾಗಿ ನಿರ್ವಹಿಸಿದ್ದಾರೆ. ಇನ್ನು, ವಿಹಾನ್ ಕೂಡಾ ಅಷ್ಟೇ ಉತ್ತಮವಾಗಿ ನಟಿಸಿದ್ದಾನೆ. ಈ ಸಿನಿಮಾ ಜನರಿಗೆ ಇಷ್ಟವಾಗಬಹುದು ಎಂಬುದಕ್ಕೆ ನನಗೆ ಯಾವುದೇ ಅನುಮಾನವಿಲ್ಲ ಎಂದು ರಕ್ಷಿತ್ ಹೊಗಳಿದ್ದಾರೆ. ಅಂದ ಹಾಗೆ ಈ ಸಿನಿಮಾ ಸೆಪ್ಟೆಂಬರ್ 5 ಕ್ಕೆ ಥಿಯೇಟರ್ ಗೆ ಬರಲಿದೆ.