ದಳಪತಿ ವಿಜಯ್ ಪಕ್ಷದ ಬಾವುಟ ನೋಡಿದ್ರೆ ಸ್ಪೇನ್ ರಾಷ್ಟ್ರ ದ್ವಜ ಇದ್ದ ಹಾಗಿದ್ಯಲ್ಲಾ ಅಂತಿದ್ದಾರೆ ನೆಟ್ಟಿಗರು

Krishnaveni K

ಶುಕ್ರವಾರ, 23 ಆಗಸ್ಟ್ 2024 (11:17 IST)
Photo Credit: Facebook
ಚೆನ್ನೈ: ದಳಪತಿ ವಿಜಯ್ ನಿನ್ನೆಯಷ್ಟೇ ತಮ್ಮ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಳಗಂನ ಲೋಗೋ ಮತ್ತು ಧ್ವಜವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಆದರೆ ಅವರ ಪಕ್ಷದ ಧ್ವಜ ನೋಡಿದ ನೆಟ್ಟಿಗರು ಇದು ಸ್ಪೇನ್ ರಾಷ್ಟ್ರದ ಧ್ವಜ ಇದ್ದ ಹಾಗಿದ್ಯಲ್ಲಾ ಎಂದು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.

ದಳಪತಿ ವಿಜಯ್ ಕೆಲವು ಸಮಯದ ಹಿಂದೆಯೇ ತಮಿಳಗ ವೆಟ್ರಿ ಕಳಗಂ ಪಕ್ಷ ಸ್ಥಾಪನೆ ಮಾಡಿದ್ದರು. ಇದೀಗ ಪಕ್ಷದ ಅಧಿಕೃತ ಲೋಗೋ ಮತ್ತು ಧ್ವಜ ಅನಾವರಣಗೊಳಿಸಿದ್ದಾರೆ. ಇದಕ್ಕಾಗಿ ವಿಶೇಷ ವಿಡಿಯೋವನ್ನೂ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವಿಜಯ್ ಲೋಗೋ ಬಿಡುಗಡೆ ಮಾಡುತ್ತಿದ್ದಂತೇ ಅದು ಎಲ್ಲೆಡೆ ವೈರಲ್ ಆಗಿದೆ. ಆದರೆ ಲೋಗೋ ಮತ್ತು ಧ್ವಜ ನೋಡಿ ಇದು ಸ್ಪೇನ್ ದೇಶದ ಬಾವುಟ ಮತ್ತು ಕೇರಳ ಕೆಎಸ್ ಆರ್ ಟಿಸಿ ಲೋಗೋ ಎರಡನ್ನೂ ಸೇರಿಸಿ ಮಾಡಿದ ಹಾಗಿದೆ ಎಂದು ಕೆಲವರು ಕಾಲೆಳೆದಿದ್ದಾರೆ.

ಕೆಂಪು ಹಳದಿ ಬಣ್ಣದ ಧ್ವಜದ ನಡುವೆ ಎರಡು ಆನೆಗಳ ಚಿತ್ರವಿರುವ ಧ್ವಜವನ್ನು ವಿಜಯ್ ನಿನ್ನೆ ಲಾಂಚ್ ಮಾಡಿದ್ದರು. ತಮಿಳುನಾಡಿನಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ವಿಜಯ್ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ. ಇದೇ ಕಾರಣಕ್ಕೆ ಅವರು ಈಗಿನಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ