'ಅನುಭವ 2' ರಲ್ಲಿ ಸಿಂಧು ಲೋಕನಾಥ್-ನೀನಾಸಂ ಸತೀಶ್...?!

ಸೋಮವಾರ, 22 ಡಿಸೆಂಬರ್ 2014 (09:27 IST)
ಲವ್ ಇನ್ ಮಂಡ್ಯ ಚಿತ್ರದ ಅಭೂತಪೂರ್ವ ಯಶಸ್ಸು ಆ ತಂಡಕ್ಕೆ ಸಿಕ್ಕಾಪಟ್ಟೆ ಖುಷಿ ನೀಡಿದೆ. ಆ ಚಿತ್ರದಲ್ಲಿ ಸತೀಶ್ ನೀನಾಸಂ ಮತ್ತು ಸಿಂಧು ಲೋಕನಾಥ್ ಅವರು ಮುಖ್ಯ ಪಾತ್ರಧಾರಿಗಳು ಆಗಿದ್ದರು. ಈಗ ಆ ಚಿತ್ರದ ತಂಡ ಮತ್ತೊಂದು ಸಿನಿಮಾ ತಯಾರಿಕೆಯತ್ತ ಆದ್ಯತೆ ನೀಡಿದೆ. ಉದಯ್ ಮೆಹತ ಆ ಚಿತ್ರದ ನಿರ್ಮಾಪಕರಾಗಿದ್ದಾರೆ. 
ಕೃಷ್ಣನ್ ಲವ್ ಸ್ಟೋರಿ, ಬಚ್ಚನ್ ನಂತಹ  ಅದ್ಧೂರಿ ಚಿತ್ರಗಳನ್ನು ನಿರ್ಮಿಸಿದ್ದ ನಿರ್ಮಾಪಕರು ಹೊಸಬರಿಗೂ ಸಹಿತ ಅವಕಾಶ ನೀಡಿದ್ದಾರೆ. ಅರಸು ಅಂತಾರೆ ಎನ್ನುವ ಪ್ರತಿಭಾವಂತ ನಿರ್ದೇಶಕರ ಕೈಲಿ ಲವ್ ಇನ್ ಮಂಡ್ಯ ಪ್ರಾಜಕ್ಟ್ ನೀಡಿದರು. ಅದು ಕಡಿಮೆ ಬಜೆಟ್ ನಲ್ಲಿ ಸಿದ್ಧವಾದರೂ ಸಹಿತ ಸೂಪರ್ ಹಿಟ್ ಆಯಿತು. ಈಗ ಬ್ರಹ್ಮಚಾರಿ ಸ್ಟಿಲ್ ಅಯಾಂ ಪೂರ್ ಎನ್ನುವ ಸಣ್ಣ ಬಜೆಟ್ ಚಿತ್ರ ನಿರ್ಮಾಣಕ್ಕೆ ಆದ್ಯತೆ ನೀಡಿದ್ದಾರೆ.
 
ಇದು ಸಹಿತ ಹೊಸಬರಿಂದ  ನಿರ್ಮಾಣವಾಗುವ ಸಿನಿಮಾ ಆಗಿದೆ. ಈಗ ಅನುಭವ 2  ಚಿತ್ರದಲ್ಲಿ ಸತೀಶ್ ಹಾಗೂ ಸಿಂಧು ಒಟ್ಟಾಗಿ ನಟಿಸುತ್ತಿದ್ದಾರೆ. ಸಣ್ಣ ಅಥವಾ ದೊಡ್ಡ ಬಜೆಟ್ ಗಿಂತ ಕಥೆಮುಖ್ಯ. ಆ ಅಂಶವು ಲವ್ ಇನ್ ಮಂಡ್ಯ ಗೆಲ್ಲುವುದಕ್ಕೆ ಸಹಾಯಮಾಡಿದೆ. ಆದಕಾರಣ ಈಗ ಉದಯ್ ಅಂತಹ ಸಿನಿಮಾಗಳ ನಿರ್ಮಾಣದತ್ತ ಗಮನ ನೀಡಿದ್ದಾರಂತೆ. ನಮ್ಮಲ್ಲಿ  ಒಳ್ಳೆಯ ಕಥೆಗಾರರು ಇದ್ದಾರೆ ಅವರನ್ನು ಬಳಸಿ ತಾನು ಚಿತ್ರವನ್ನು ನಿರ್ಮಿಸುತ್ತೇನೆ ಎಂದು ಹೇಳಿದ್ದಾರೆ ನಿರ್ಮಾಪಕರು. ಮತ್ತಷ್ಟು ಒಳ್ಳೆಯ ಚಿತ್ರಗಳು ಉದಯ್ ನಿರ್ಮಿಸಲಿ. 

ವೆಬ್ದುನಿಯಾವನ್ನು ಓದಿ