ಮರಳಿ ಗೂಡಿಗೆ ಬಂದ ಸಮಾಜ ಮುಖಿ ಶಿವರಾಮಣ್ಣ

ಶುಕ್ರವಾರ, 26 ಡಿಸೆಂಬರ್ 2014 (09:38 IST)
ಕಳೆದ 55  ವರ್ಷಗಳಿಂದ ಬಣ್ಣದ ಲೋಕದಲ್ಲಿ ಸೇವೆ ಸಲ್ಲಿಸುತ್ತಿರುವ ಶಿವರಾಮಣ್ಣನಿಗೆ ಈಗ ಎಪ್ಪತ್ತು + ವಯೋಮಿತಿ. ಆದರು ಬತ್ತದ ಉತ್ಸಾಹದ ಅವರನ್ನು ಸದಾ ಚಟುವಟಿಕೆಯಿಂದ ಇಟ್ಟಿದೆ. ಇತ್ತೀಚಿಗೆ ಅವರು ಸುಮಾರು 50 ದಿನಗಳ ಕಾಲ  ಯುಎಸ್ ಮತ್ತು  ಯುಕೆ  ದೇಶಗಳಿಗೆ ಹೋಗಿ ಬಂದರು. 
ಅದರಲ್ಲೇನು ವಿಶೇಷತೆ ಅಂತೀರಾ ? ಇದೆ ಅವರು ಸುಮ್ಮನೆ ಕಾಲ ಕಲಿಯಲು ಅಲ್ಲಿಗೆ ಹೋಗದೆ ಕಿವುಡ ಮತ್ತು ಮೂಕರ ಶಾಲೆಯಾದ ಸಮರ್ಥನಂದ ವಿದ್ಯಾರ್ಥಿಗಳ ಜೊತೆ ಹೋಗಿ ಬಂದರು. ಅವರ ಜೊತೆ ವಿದೇಶ ಸುತ್ತಿ ಬಂದವರಲ್ಲಿ ನಾಲ್ಕು ಅಂಧರು ಮತ್ತು ನಾಲ್ಕು ಕಿವುಡ ಮತ್ತು ಮೂಕ ಮಕ್ಕಳು. ದೇವರು ದೇವತಾರ್ಚನೆಯ ವಿಷಯದಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡಿರುವ ಶಿವರಾಮಣ್ಣ ಸಮಾಜಮುಖಿಯಾಗಿಯೂ ಎಲ್ಲರ ಮನ ಗೆದ್ದಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋ, ಕ್ಯಾಲಿ ಫಾರ್ನಿಯ, ವಾಷಿಂಗ್ಟನ್, ಬಾಸ್ಕೊ ಸೇರಿದಂತೆ ಅನೇಕ ಕಡೆಗಳಲ್ಲಿ ಅವರು ಮಕ್ಕಳೊಂದಿಗೆ ಸಾಸ್ಕೃತಿಕ ಕಾರ್ಯಕ್ರಮ ನೀಡಿ ಬಂದಿದ್ದಾರೆ. 
 
ಅವರ ಜೊತೆ ವೆಂಕಟೇಶ ಮೂರ್ತಿ,ವೈಕೆ ಮುದ್ದು ಕೃಷ್ಣ, ಡಾ. ಪುಟ್ಟ ಸ್ವಾಮಿ ಮುಂತಾದವರು ಮಾತಿನ ರಸಗವಳ ನೀಡಿ ಬಂದಿದ್ದಾರೆ. ಪ್ರಸ್ತುತ ಶಬರಿಮಲೆಗೆ ಹೋಗಲು ಸಿದ್ಧ ಆಗಿರುವ ಗುರುಸ್ವಾಮಿ ಶಿವರಾಮಣ್ಣ ತಮ್ಮ ಜೀವಿತಾವಧಿಯಲ್ಲಿ ಸುಮಾರು 75  ಬಾರಿ ಶಬರಿ ಮಲೈಗೆ ಹೋಗಿ ಬಂದಿದ್ದಾರೆ. ಅವರ 50  ದಿನಗಳ ಯಾತ್ರೆಯು ಪುಸ್ತಕ ರೂಪದಲ್ಲಿ   ಬರಲಿದೆ. ಅದಕ್ಕಾಗಿ ಸ್ವಲ್ಪ ಕಾಲ ಕಾಯ ಬೇಕು ನಾವು ! 

ವೆಬ್ದುನಿಯಾವನ್ನು ಓದಿ