ಶಾರುಖ್ -ಆಮೀರ್ ಖಾನ್ ನಡುವೆ ಶೀತಲ ಸಮರ ?

ಬುಧವಾರ, 15 ಅಕ್ಟೋಬರ್ 2014 (12:01 IST)
ಸಲ್ಮಾನ್ ಖಾನ್ ಮತ್ತು ಆಮೀರ್ ಖಾನ್ ನಡುವೆ ಗಾಢ ಸ್ನೇಹ ಇರುವ ಬಗ್ಗೆ ಎಲ್ಲರಿಗು ಗೊತ್ತೇ ಇದೆ. ಅವರಿಬ್ಬರೂ ತಮ್ಮ ಪ್ರೀತಿಯನ್ನು ಅನುಗಾಲ ಹಾಗೆ ಉಳಿಸಿಕೊಂಡಿದ್ದಾರೆ ಮತ್ತು ಬೆಳೆಸಿಕೊಂಡಿದ್ದಾರೆ.

ಆದರೆ ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಸ್ನೇಹದಲ್ಲಿ ಆ ರೀತಿ ಇಲ್ಲ. ಇಬ್ಬರ ನಡುವೆ ಬಾಂಧವ್ಯ ಟೀವಿ, ಪೇಪರ್  ಹಾಗೂ ಯಾವುದಾದರೂ ಕಾರ್ಯಕ್ರಮಗಳಿಗೆ ಪೋಸ್ ಕೊಡುವಂತೆ ಇಲ್ಲ ಎಂದೇ ಹೇಳ ಬಹುದು. 
 
ಬಾಲಿವುಡ್ ನಲ್ಲಿ ಹರಡಿರುವ ಸುದ್ದಿ ಪ್ರಕಾರ ಶಾರುಖ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ ಹ್ಯಾಪಿ ನ್ಯೂ ಇಯರ್ ನಲ್ಲಿ ಆಮೀರ್ ಖಾನ್ ಅವರ ಬಹು ನಿರೀಕ್ಷೆಯ ಚಿತ್ರ ಪಿಕೆಯ ಟ್ರೇಲರ್ ನ್ನು ಪ್ರಸಾರ ಮಾಡುವುದಕ್ಕೆ ಗಮನ ನೆಟ್ಟಿದ್ದಾರೆ. ಆಶ್ಚರ್ಯ ಎಂದರೆ ಈ ಬಗ್ಗೆ ಒಂದು ಒಂದೇಒಂದು ಮಾತನ್ನು ಶಾರುಖ್ ಖಾನ್ ಜೊತೆ ಆಡಿಲ್ಲವಂತೆ ಆಮೀರ್ ಖಾನ್. 
 
ವಿಚಿತ್ರ ಎಂದರೆ ಶಾರುಖ್ ಅವರ ಬಳಿ ಈ ಬಗ್ಗೆ ಪ್ರಸ್ತಾಪಿಸದೆ ಆಮೀರ್ ನೇರವಾಗಿ ಮಲ್ಟಿಪ್ಲೆಕ್ಸ್  ಜೊತೆ ಇದಕ್ಕೆ ಸಂಬಂಧಪಟ್ಟಂತೆ ಮಾತುಕತೆ ನಡೆಸಿದ್ದಾರಂತೆ. ಪಿಕೆ ಟ್ರೇಲರ್ ದೀಪಾವಳಿ ಹಬ್ಬದ ಸಮಯದಲ್ಲಿ ಬಿಡುಗಡೆ ಆಗಲು ಸಿದ್ಧತೆ ನಡೆಸಲಾಗಿದೆ. ಶಾರುಖ್ ಜೊತೆ ಮಾತನಾಡದೆ ಹಂಚಿಕೆದಾರರ ಬಳಿ ಮಾತನಾಡಿರುವು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ ಮಾಧ್ಯಮಗಳಲ್ಲಿ. 
 
ಪಿಕೆ ಮೊದಲ ಪೋಸ್ಟರ್ ಕಿಕ್ ಚಿತ್ರದ ಬಿಡುಗಡೆಯ ಸಮಯದಲ್ಲಿ ಆಗ ಬೇಕಿತ್ತು. ಆದರೆ ಆಮೀರ್ ಅದನ್ನು ಹತ್ತು ದಿನಗ ಕಾಲ ಮುಂದೂಡಿದ್ದರು. ಹ್ಯಾಪಿ ನ್ಯೂ ಇಯರ್ ನಲ್ಲಿ ಅಜಯ್ ದೇವಗನ್ ಅವರ ಆಕ್ಷನ್ ಜಾಕ್ಸನ್ ಚಿತ್ರದ ಟ್ರೇಲರ್ ಇದೆ.. ಒಟ್ಟಾರೆ ಈ ಶೀತಲ ಸಮರಕ್ಕೆ ಎಂದಿಗೆ ಅಂತ್ಯ ಸಿಗುತ್ತದೆಯೋ ಕಾದು ನೋಡುವ!
 

ವೆಬ್ದುನಿಯಾವನ್ನು ಓದಿ