ಈಗ ಈ ತಾರ ಜೋಡಿ ಬದುಕಲ್ಲಿ ಮತ್ತೋರ್ವ ಸದಸ್ಯನ ಆಗಮನ ಆಗಿದೆ. ಹೌದು ನಿಮ್ಮ ಎಣಿಕೆ ಸರಿ ಅವರು ಈಗ ಗಂಡು ಮಗುವಿನ ಪೋಷಕರಾಗಿದ್ದಾರೆ. ಇತ್ತೀಚೆಗಷ್ಟೇ ಅಜಿತ್ ಅವರು ನಟಿಸಿದ್ದ ಯೆನ್ನೈ ಅರಿಂದಾಲ್ ಚಿತ್ರ ಬಿಡುಗಡೆ ಆಗಿತ್ತು. ಆ ಚಿತ್ರದಲ್ಲಿ ಅನುಷ್ಕ ಮತ್ತು ತ್ರಿಶ ನಟಿಸಿದ್ದರು. ಯಶಸ್ವಿ ಚಿತ್ರಗಳ ಸಾಲಿಗೆ ಸೇರಿರುವ ಯೆನ್ನೈ ಚಿತ್ರದ ಬಳಿಕ ಸ್ವಲ ಕಾಲ ತಮಗೆ ವಿರಾಮ ಬೇಕು ಎಂದು ನಿರ್ಮಾಪಕರ ಬಳಿ ಹೇಳಿದ್ದರು ಅಜಿತ್. ಅದಕ್ಕೆ ಕಾರಣ ಅವರ ಧರ್ಮ ಪತ್ನಿ ಗರ್ಭಿಣಿಯಾಗಿದ್ದು ಹಾಗೂ ಆಕೆಯ ಹೆರಿಗೆಯ ದಿನಗಳು ಸಮೀಪಿಸುತ್ತಿತ್ತು. ಈಗ ತಾಯಿ ಮಗು ಕ್ಷೇಮವಾಗಿದ್ದಾರೆ.