ದಾವೂದ್ ತಂಗಿಯ ಪಾತ್ರದಲ್ಲಿ ಸೋನಾಕ್ಷಿ ಸಿನ್ಹಾ

ಬುಧವಾರ, 5 ಆಗಸ್ಟ್ 2015 (09:55 IST)
ದಬಾಂಗ್ ಚೆಲುವೆ ಸೋನಾಕ್ಷಿ ಸಿನ್ಹಾ ಅವರನ್ನು ಮತ್ತೊಮ್ಮೆ ವಿಭಿನ್ನ ಪಾತ್ರದಲ್ಲಿ ನೋಡೋ ಅವಕಾಶ ಚಿತ್ರರಸಿಕರಿಗೆ ಒದಗಿ ಬಂದಿದೆ. ಸೋನಾಕ್ಷಿ ಸಿನ್ಹಾ ಅಪೂರ್ವ ಲಖೀಯಾ ನಿರ್ದೇಶನದ ಹಸೀನಾ ಅನ್ನೋ ಸಿನಿಮಾದಲ್ಲಿ ನಟಿಸ್ತಿದ್ದು ಈ ಸಿನಿಮಾ ಈಗಾಗಲೇ ಬಾಲಿವುಡ್ ಅಂಗಳದಲ್ಲಿ ತೀವ್ರ ಕುತೂಹಲ ಮೂಡಿಸಿದೆ. 
ಇನ್ನು ಹಸೀನಾ ಸಿನಿಮಾ ಈಗಾಗಲೇ ಬಾಲಿವುಡ್ ಅಂಗಳದಲ್ಲಿ ಈ ಪರಿ ಕುತೂಹಲ ಮೂಡಿಸೋಕೆ ಪ್ರಮುಖ ಕಾರಣ ಅದು ಅಂಡರ್ ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ಅವರ ತಂಗಿ ಹಸೀನಾ ಅವರ ಜೀವನಾಧಾರಿತ ಸಿನಿಮಾ. ಇನ್ನು ಹಸೀನಾ ತಮ್ಮ 55 ವರ್ಷದಲ್ಲೇ ಇಹಲೋಕ ತ್ಯಜಿಸಿದ್ದರೂ ಅವರು ಇದ್ದಷ್ಟು ದಿನ ಅಂಡರ್ ವರ್ಲ್ಡ್ ಕ್ವೀನ್ ಅಂತಾನೇ ಫೇಮಸ್ ಆಗಿದ್ದರು. ಇದೀಗ ಆಕೆಯ ಜೀವನ ಕಥೆ  ಸಿನಿಮಾವಾಗುತ್ತಿದ್ದು ಸೋನಾಕ್ಷಿ ಸಿನ್ಹಾ ಹಸೀನಾ ಆಕೆ ತೆರೆಯ ಮೇಲೆ ಕಂಗೊಳಿಸಲಿದ್ದಾರೆ.
 
ಸೋನಾಕ್ಷಿ ಸಿನ್ಹಾ ಅಂತು ತಾನು ಹಸೀನಾ ಪಾತ್ರ ನಿರ್ವಹಿಸುತ್ತಿರುವುದಕ್ಕೆ ಫುಲ್ ಖುಷಿಯಾಗಿದ್ದಾರಂತೆ. ತಾನು ಆ ಸಿನಿಮಾದಲ್ಲಿ ಯಾವಾಗ ನಟಿಸುತ್ತೇನೆ ಅಂತಾ ಸೋನಾಕ್ಷಿ ಕಾಯುತ್ತಿದ್ದಾರಂತೆ. ಅದೇನೇ ಇರಲಿ ಈ ಸಿನಿಮಾದ ಬಗ್ಗೆ ಸೋನಾಕ್ಷಿ ಎಕ್ಸೈಟ್ ಆಗಿರೋದು ನೋಡಿದ್ರೆ ಪಾತ್ರದಲ್ಲಿ ಸೋನಾಕ್ಷಿ ಕಮಾಲ್ ಮಾಡೋ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ವೆಬ್ದುನಿಯಾವನ್ನು ಓದಿ