ಆಕಿರಾ ಚಿತ್ರಕ್ಕೆ ಲೋಕಲ್ ಟ್ರೈನ್ ಹತ್ತಿದ ಸೋನಾಕ್ಷಿ ಸಿನ್ಹ

ಶುಕ್ರವಾರ, 31 ಜುಲೈ 2015 (10:36 IST)
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹ ಈಗ ಇಂಡಿಯಾ ಗಾಟ್ ಟ್ಯಾಲೆಂಟ್ ಜೂನಿಯರ್  ಎನ್ನುವ ಪ್ರತಿಷ್ಠಿತ ರಿಯಾಲಿಟಿ ಷೋ ತೀರ್ಪುಗಾರ್ತಿಯರಲ್ಲಿ ಒಬ್ಬಾಕೆಯಾಗಿದ್ದಾರೆ. ಈಗ ಆಕೆ ಆಕಿರ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ದಬಾಂಗ್ ಚೆಲುವೆ ತಮ್ಮ ಹೊಸ ಚಿತ್ರ ಆಕಿರಾ ಗೆಂದು ಲೋಕಲ್  ಟ್ರೈನ್ ನಲ್ಲಿ ಪ್ರಯಾಣಿಸಿದರು. ಅದನ್ನು ಅವರು ಟ್ವೀಟ್  ಮಾಡಿ ಹೇಳಿದ್ದಾರೆ. ಆಕೆ ತಾನು ಕಾಲೇಜ್ ಓದುವ ಸಮಯದಲ್ಲಿ ಲೋಕಲ್ ಟ್ರೈನ್ ನಲ್ಲಿ ಪ್ರಯಾಣ ಮಾಡಿದ್ದನ್ನು ನೆನಪಿಸಿ ಕೊಂಡಿದ್ದಾರೆ. ಅದಾದ ಬಳಿಕ ಸಿನಿಮಾಕ್ಕೆಂದು ಅವರು ಟ್ರೈನ್ ಹತ್ತಿದ್ದಾರೆ. 
ಫಾಕ್ಸ್ ಸ್ಟಾರ್ ಸ್ಟುಡಿಯೋದಿಂದ ನಿರ್ಮಾಣವಾಗುತ್ತಿರುವ ಆಕಿರ ಚಿತ್ರವನ್ನು ಎ ಆರ್ ಮುರುಗದಾಸ್ ಅವರು ನಿರ್ದೇಶನ ಮಾಡಿದ್ದಾರೆ. ಇದು ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಚಿತ್ರವಾಗಿದೆ. ಇದರಲ್ಲಿ ಸೋನಾಕ್ಷಿ ಅಲ್ಲದೆ ಕೊಂಕಣ್ ಸೇನ್ ಶರ್ಮ, ಅನುರಾಗ್ ಕಶ್ಯಪ್ ಮತ್ತು ಶತ್ರುಘನ್ ಸಿನ್ಹ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 
 
ಆಕಿರ ಮುರುಗದಾಸ್ ಅವರ ನಿರ್ದೇಶನದಲ್ಲಿ ತಯಾರಾದ ಮೂರನೇ ಹಿಂದಿ ಚಿತ್ರವಾಗಿದೆ. ಈ ಮೊದಲು ಗಜನಿ, ಆನಂತರ ಹಾಲಿಡೇ : ಎ ಸೋಲ್ಜರ್ ಈಸ್ ನೆವರ್ ಆಫ್ ಡ್ಯೂಟಿ ಎನ್ನುವ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಗಜನಿಯಲ್ಲಿ ಆಮೀರ್ ಖಾನ್, ಹಾಲಿಡೇ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮುಖ್ಯ ಪಾತ್ರಧಾರಿಗಳಾಗಿದ್ದರು. ತಮಿಳಿನಲ್ಲಿ 2011 ರಲ್ಲಿ ಬಿಡುಗಡೆ ಆಗಿದ್ದ ಮೌನಗುರು ತಮಿಳು ಚಿತ್ರ ರೀಮೇಕ್ ಆಕಿರಾ ಆಗಿದೆ. 

ವೆಬ್ದುನಿಯಾವನ್ನು ಓದಿ