ಸಿನಿಮಾ ನಟನನ್ನು ಮದುವೆಯಾಗಲ್ಲ ಅಂದ ಸೋನಾಕ್ಷಿ

ಶುಕ್ರವಾರ, 11 ಸೆಪ್ಟಂಬರ್ 2015 (10:24 IST)
ತಮ್ಮ ನೆಚ್ಚಿನ ಸಿನಿಮಾ ನಟ ನಟಿಯರ ಮದುವೆ ವೈಯುಕ್ತಿಕ ಜೀವನದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲಗಳಿರುತ್ತವೆ. ಅದರಲ್ಲೂ ನಟ ನಟಿಯರ ಹೆಸರುಗಳು ಇತರೆ ತಾರೆಯರ ಹೆಸರಿನೊಂದಿಗೆ ಥಳುಕು ಹಾಕಿಕೊಳ್ಳೋದು ಕಾಮನ್. ಆದ್ರೆ ಸೋನಾಕ್ಷಿ ಸಿನ್ಹಾ ಈ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ಸೋನಾಕ್ಷಿ ಸಿನ್ಹಾ ಹಾಗೂ ತೆವಾರ್ ಸಿನಿಮಾದಲ್ಲಿ ಅವರ ಜೊತೆ ನಟಿಸಿದ್ದ ಅರ್ಜುನ್ ಕಪೂರ್ ನಡುವೆ ಸಂಥಿಂಗ್ ಸಂಥಿಂಗ್ ಇದೆ ಅನ್ನೋ ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಗುಲ್ಲೆದ್ದಿದ್ದವು. ಅವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿತ್ತು. ಆದ್ರೆ ಸೋನಾಕ್ಷಿ ಈ ಸುದ್ದಿಗೆ ಪೂರ್ಮ ವಿರಾಮವಿಟ್ಟಿದ್ದಾರೆ. ನಮ್ಮಿಬ್ಬರ ನಡುವೆ ಏನೂ ಇಲ್ಲ. ಒಬ್ಬ ನಟ ಹಾಗೂ ಒಬ್ಬ ನಟಿ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ ಅಂದ್ರೆ ಅವರ ನಡುವೆ ಏನೋ ಇದೆ ಅಂತಾ ಜನ ಸುದ್ದಿ ಮಾಡುತ್ತಾರೆ. ನಾನು ಅರ್ಜುನ್ ಅದೇ ರೀತಿ ಜೊತೆಯಾಗಿ ಕೆಲಸ ಮಾಡಿದ್ದೇವೆ. ಅವನು ನನ್ನ ನೆರೆಮನೆಯವನು. ಹಾಗಂಥಾ ನಾವಿಬ್ಬರು ಪ್ರೇಮಿಗಳು ಅಂದ್ರೆ ಅದೆಷ್ಟು ಸರಿ ಎಂದಿದ್ದಾರೆ.
 
ಇನ್ನು ಸೋನಾಕ್ಷಿ ಸಿನ್ಹಾ ಮದುವೆಯ ಬಗ್ಗೆ. ಮೌನ ಮುರಿದಿದ್ದಾಳೆ. ನಾನು ಯಾವತ್ತೂ ಸಿನಿಮಾ ನಟನನ್ನು ಮದುವೆಯಾಗಲ್ಲ ಎಂದಿದ್ದಾರೆ. ಆದ್ರೆ ಸೋನಾಕ್ಷಿ ಯಾಕೆ ಈ ರೀತಿ ಹೇಳಿದ್ದಾಳೆ ಅನೇನೋದು ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಂತಾಗಿದೆ.

ವೆಬ್ದುನಿಯಾವನ್ನು ಓದಿ