ಸೋನಮ್ ಕಪೂರ್‌ಳನ್ನು ಗೊಂದಲಕ್ಕೀಡು ಮಾಡಿದ ಆ ಪ್ರಶ್ನೆ...?

ಗುರುವಾರ, 18 ಡಿಸೆಂಬರ್ 2014 (10:47 IST)
ತಾನು ಏನಾದರು ಗಂಡು ಹುಡುಗ ಅಥವಾ ಹೀರೋ ಆದ್ರೆ ಡೇಟಿಂಗ್ ಮಾಡೋದು ಕತ್ರಿನಾ ಕೈಫ್ ಜೊತೆ ಎನ್ನುವ ಮಾತನ್ನು ಇತ್ತೀಚಿಗೆ ಸೋನಂ ಕಪೂರ್ ಸಲ್ಮಾನ್ ಖಾನ್ ಅವರ ಬಳಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹೇಳಿದ್ದಳು. ಬಾಲಿವುಡ್ ಚಿತ್ರರಂಗದ ಮುದ್ದಾದ ನಟಿ ಸೋನಂ ಕಪೂರ್ ಆರಂಭದಲ್ಲಿ  ನಿರ್ದೇಶನ ಮಾಡುವ ಆಸೆ ಹೊತ್ತು ಬಂದರೂ ಆನಂತರ ನಟಿಯಾಗಿ ಬದಲಾದಳು. 
ಆಕೆಯು ಆರಂಭದಲ್ಲಿ ಕಪೂರ್ ಖಾಂದಾನ್ ಕುಡಿಯಾದ ರಣಬೀರ್ ಕಪೂರ್ ಜೊತೆ ಲವ್ವಲ್ಲಿ ಬಿದ್ರು ಆ ದುಂಬಿ ತನ್ನ ಗಮನ ದೀಪಿಕ ಪಡುಕೋಣೆ ಆ ಬಳಿಕ ಕತ್ರಿನ ಕೈಫ್ ಕಡೆ ನೆಟ್ಟಿದ್ದು ಹಳೆಯ ಕಥೆ. ಈಗ  ಆ ವಿಷಯವೆಲ್ಲ ಯಾಕೆ ಅಂತೀರ ಅದು ಸರೀ ಅನ್ನಿ, ನಾವು ಹೇಳೋಕೆ ಹೊರಟಿರುವ ಸಂಗತಿ ಏನೆಂದರೆ ಸೋನಂ ಗೊಂದಲ ಎದುರಿಸುತ್ತಿದ್ದಾಳೆ. ಆಕೆಗೆ ಸಿಕ್ಕಾಪಟ್ಟೆ ಕನ್ ಫ್ಯೂಜನ್  ಆಗಿದೆಯಂತೆ. ಮಾಧ್ಯಮಗಳ ಮುಂದೆ ಉತ್ತರಿಸುವಾಗ ಆಕೆಗೆ ಗೊಂದಲ ಎದುರಾಗಿದೆ. ಚಿತ್ರ ಒಂದರ ಶೂಟಿಂಗ್ ವಿರಾಮದ ಸಮಯದಲ್ಲಿ ನಿನಗೆ ಎಂತಹ ವರಬೇಕು ಎಂದು ಕೇಳಿದಾಗ ಅದರ ಬಗ್ಗೆ ತನಗೆ ಸ್ಪಷ್ಟವಾಗಿ  ಉತ್ತರ ಗೊತ್ತಿಲ್ಲ ಎಂದು ಹೇಳಿದ್ದಾಳೆ. 
 
ಡೋಲಿಕಿ ಡೋಲಿ ಚಿತ್ರದ ಶೂಟಿಂಗ್ ನ ವಿರಾಮದ ಬಳಿಕ ಮಾಧ್ಯಮದ ಪ್ರತಿನಿಧಿಗಳು ಕೇಳಿದ ಈ ಪ್ರಶ್ನೆಗೆ ಆಕೆ ಉತ್ತರ ನೀಡಲು ಕಷ್ಟವಾಯ್ತಂತೆ. ಸದ್ಯಕ್ಕೆ ತನಗೆ ಮದುವೆ ಆಗಿ ಮನೆಯಲ್ಲಿ ಇರಲು ಇಷ್ಟವಿಲ್ಲೆಂದು ತನಗೆ ತೋಚಿದ ಉತ್ತರ ಹೇಳಿದ್ದಾಳೆ. 
 

ವೆಬ್ದುನಿಯಾವನ್ನು ಓದಿ