'ಜೂಮ್' ಚಿತ್ರದ ಹಾಡುಗಳ ಚಿತ್ರೀಕರಣ ಇಟಲಿಯಲ್ಲಿ

ಶನಿವಾರ, 27 ಜೂನ್ 2015 (10:14 IST)
ರಾಧಿಕ ಪಂಡಿತ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್  ಅಭಿನಯದ ಚಿತ್ರ ಜೂಮ್. ಆ ಚಿತ್ರತಂಡ ಈಗ ಇಟಲಿ ದೇಶದಲ್ಲಿದ್ದಾರೆ. ಅದಕ್ಕೇನು ಕಾರಣ ಎನ್ನುವುದು ನಿಮಗೆ ಗೊತ್ತೇ ಇದೆ. ನಿಮ್ಮ ಊಹೆ ಸರಿ ಅಲ್ಲಿ ಸಿನಿಮಾದ  ಹಾಡಿನ ಚಿತ್ರೀಕರಣ ಸಾಗುತ್ತಿದೆ. ಜೂಮ್ ಚಿತ್ರವನ್ನು ಪ್ರಶಾಂತ್ ರಾಜ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಲವ್ ಗುರು ಚಿತ್ರ ಖ್ಯಾತಿಯ ಪ್ರಶಾಂತ್ ರಾಜ್ ಈಗ ಗಣೇಶ್ ಅವರ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 
ಜೂಮ್ ಚಿತ್ರದ ಹಾಡಿನ ರೆಕಾರ್ಡಿಂಗ್ ಕಳೆದ  ವರ್ಷ ಗಣೇಶ್ ಅವರ ಹುಟ್ಟುಹಬ್ಬದ ಸಮಯದಲ್ಲಿ ನಡೆಯಿತು. ಆದರೆ ಈ ವರ್ಷ ಅದರ ಶೂಟಿಂಗ್ ನಡೆಯುತ್ತಿದೆ. ಪ್ರಸ್ತುತ ಎಲ್ಲಾ ಹಾಡುಗಳನ್ನು  ಇಟಲಿ ದೇಶದಲ್ಲಿಯೇ  ಚಿತ್ರೀಕರಣ ಮಾಡುವ ಭರದಲ್ಲಿದ್ದಾರೆ ಪ್ರಶಾಂತ್ ರಾಜ್. ಜೂಮ್ ಚಿತ್ರದಲ್ಲಿ ಗಣೇಶ್, ರಾಧಿಕ ಪಂಡಿತ್ ಅಲ್ಲದೆ ಸಾಧು ಕೋಕಿಲ, ಕಾಶಿನಾಥ್ ಮುಂತಾದವರು ನಟಿಸಿದ್ದಾರೆ. ಎಸ್ಎಸ್ ತಮನ್ ಅವರು ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. 

ವೆಬ್ದುನಿಯಾವನ್ನು ಓದಿ