ಜಾಮೀನು ಸಿಕ್ಕರೂ ಸೋನು ಶ್ರೀನಿವಾಸ್ ಗೌಡಗೆ ಸಿಕ್ಕಿಲ್ಲ ಬಿಡುಗಡೆ ಭಾಗ್ಯ

Krishnaveni K

ಶನಿವಾರ, 6 ಏಪ್ರಿಲ್ 2024 (10:29 IST)
ಬೆಂಗಳೂರು: ಹೆಣ್ಣು ಮಗುವನ್ನು ದತ್ತು ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ನಟಿ ಸೋನು ಶ್ರೀನಿವಾಸ್ ಗೌಡಗೆ ಷರತ್ತು ಬದ್ಧ ಜಾಮೀನು ಸಿಕ್ಕರೂ ಇನ್ನೂ ಬಿಡುಗಡೆಯಾಗಿಲ್ಲ. ಇದಕ್ಕೆ ಕಾರಣ ಇಲ್ಲಿದೆ.

ಇತ್ತೀಚೆಗೆ ತಮ್ಮ ಮನೆಯ ಪಕ್ಕದಲ್ಲಿದ್ದ ಹೆಣ್ಣು ಮಗುವನ್ನು ಅಕ್ರಮವಾಗಿ ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನು ಗೌಡರನ್ನು ಬಂಧಿಸಲಾಗಿತ್ತು. ಬಳಿಕ ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ  ವಿಧಿಸಿತ್ತು. ಅದರಂತೆ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.

ಆದರೆ ಈಗ ನ್ಯಾಯಾಲಯ 1 ಲಕ್ಷ ರೂ. ಬಾಂಡ್, ಇಬ್ಬರ ಶ್ಯೂರಿಟಿ ಮೇಲೆ ಸೋನು ಶ್ರೀನಿವಾಸ್ ಗೌಡಗೆ ಜಾಮೀನು ನೀಡಲು ಒಪ್ಪಿಗೆ ಸೂಚಿಸಿತ್ತು. ಈ ಷರತ್ತುಗಳನ್ನು ಪಾಲಿಸಿದ ಬಳಿಕ ಅವರು ಬಿಡುಗಡೆಯಾಗಲಿದ್ದಾರೆ. ಆದರೆ ನ್ಯಾಯಾಲಯದ ಆದೇಶ ಪ್ರತಿ ಇನ್ನೂ ಜೈಲಾಧಿಕಾರಿಗಳಿಗೆ ತಲುಪಿಲ್ಲ.

ನಿನ್ನೆ ಸಂಜೆ 7 ಗಂಟೆಯೊಳಗಾಗಿ ಆದೇಶ ಪ್ರತಿ ಅಧಿಕಾರಿಗಳ ಕೈ ಸೇರಬೇಕಿತ್ತು. ಆದರೆ ಆದೇಶ ಪ್ರತಿ ಸಿಕ್ಕಿರಲಿಲ್ಲ. ಹೀಗಾಗಿ ಸೋನು ಇಂದು ಆದೇಶ ಪ್ರತಿ ತಲುಪಿದ ಬಳಿಕವಷ್ಟೇ ಬಿಡುಗಡೆಯಾಗಲಿದ್ದಾರೆ. ದತ್ತು ಪಡೆಯುವಾಗ ಸೋನು ನಿಯಮ ಪಾಲಿಸದಿರುವುದು ಅವರಿಗೆ ಮುಳುವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ