ಮತ್ತೇ 14 ದಿನ ನ್ಯಾಯಾಂಗ ಬಂಧನ: ಪರಪ್ಪನ ಅಗ್ರಹಾರಕ್ಕೆ ನಟಿ ಸೋನು ಗೌಡ ಶಿಫ್ಟ್‌

Sampriya

ಸೋಮವಾರ, 25 ಮಾರ್ಚ್ 2024 (14:57 IST)
photo Courtesy Instagram
ಬೆಂಗಳೂರು: ಬಾಲಕಿಯ ಅಕ್ರಮ ದತ್ತು ಪ್ರಕರಣದಲ್ಲಿ ನಟಿ ಸೋನು ಗೌಡ ಅವರುಗೆ ಏಪ್ರಿಲ್ 8 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಗಿದೆ.

ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಹಿನ್ನೆಲೆ ಬಿಗ್‌ಬಾಸ್‌ ಕನ್ನಡ ಸೀಸನ್ 9ರ ಸ್ಪರ್ಧಿ ಸೋನು ಶ್ರೀನಿವಾಸ ಗೌಡ ಅವರನ್ನು ಬಂಧಿಸಲಾಗಿತ್ತು. ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ನಟಿಯನ್ನು ಬಂಧಿಸಿ ಕೋರ್ಟ್​ಗೆ ಹಾಜರು ಪಡಿಸಿದ್ರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಸೋನು ಗೌಡ ಅವರನ್ನು ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ನೀಡಿದ್ದರು.

ಇಂದು ಕೋರ್ಟ್‌ಗೆ ನಟಿ ಹಾಜರಾಗಿದ್ದು ತನಿ ಈಗ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ನಟಿ ಮೊಬೈಲ್ ಜಪ್ತಿ ಮಾಡಲಾಗಿದೆ. ಮಗುವಿನ ಜೊತೆ ಮಾಡಿರೋ ರೀಲ್ಸ್ ಡೌನ್ ಲೋಡ್ ಮಾಡಿ ಅದನ್ನು ಪಂಚನಾಮೆಗೆ ಕಳುಹಿಸಲಾಗಿದೆ. ಭಾನುವಾರ ಸೋನು ವಾಸವಿದ್ದ ಅಪಾರ್ಟ್ಮೆಂಟ್ ನಲ್ಲಿ ಅಕ್ಕಪಕ್ಕ ನಿವಾಸಿಗಳ ಹೇಳಿಕೆ ಕೂಡ ಪಡೆಯಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ