ಕನ್ನಡ ಬಿಗ್ಬಾಸ್ನಲ್ಲಿ ಭಾಗವಹಿಸಿದ್ದ, ರೀಲ್ಸ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಸೋನು ಶ್ರೀನಿವಾಸ್ ಗೌಡ ಅವರು ಸದಾ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ಬಂಧನ, ಜೈಲು ಅಂತಾ ಕಹಿ ವಿಚಾರಕ್ಕೆ ಸುದ್ದಿಯಲ್ಲಿದ್ದ ಸೋನು ಗೌಡ ಇದೀಗ ಸಂತೋಷದ ವಿಚಾರವನ್ನು ಹಂಚಿಕೊಂಡಿದ್ದಾರೆ.
ಯೂಟ್ಯೂಬ್ನಲ್ಲಿ ತನ್ನ ಮದುವೆ ವಿಚಾರದ ಬಗ್ಗೆ ಹೇಳಿಕೊಂಡಿದ್ದಾರೆ. ನನ್ನ ಮದುವೆ ಫಿಕ್ಸ್ ಆಯ್ತು ಅಂತಾ ವಿಡಿಯೋಗೆ ಕ್ಯಾಪ್ಷನ್ ಕೊಟ್ಟಿರುವ ಸೋನು ಶ್ರೀನಿವಾಸ್ ಗೌಡ, ಚಿಕ್ಕಪೇಟೆ ಶಾಪಿಂಗ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಹೀಗಾಗಿ ಸೋನು ಗೌಡ ಮದುವೆ ವಿಚಾರ ಎಲ್ಲೆಡೆ ಹರಿದಾಡುತ್ತಿದೆ. ಚಿಕ್ಕಪೇಟೆಯಲ್ಲಿ ದೊಡ್ಡ ಮಟ್ಟದಲ್ಲಿ ಶಾಪಿಂಗ್ ಮಾಡಿರುವ ವಿಡಿಯೋವನ್ನು ನೋಡಿದ ಬಹುತೇಕರು ಸದ್ಯದಲ್ಲೇ ಸೋನು ಗೌಡ ಹಸೆಮಣೆ ಏರಲಿದ್ದಾರೆಂದು ನಂಬಿದ್ದಾರೆ. ಆದರೆ ಅದೇ ವಿಡಿಯೋ ಕೊನೆಯಲ್ಲಿ ಟ್ವಿಸ್ ಕಟ್ಟಿರುವ ಸೋನು, ಗೃಹ ಪ್ರವೇಶಕ್ಕೆ ಇಷ್ಟೆಲ್ಲಾ ಶಾಪಿಂಗ್ ಎನ್ನುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಇದರ ಜತೆಗೆ ನನ್ನ ಮದುವೆ ಫಿಕ್ಸ್ ಆಗಿದೆ. ಸದ್ಯದಲ್ಲೇ ಈ ಬಗ್ಗೆ ಹೇಳುತ್ತೇನೆ ಎನ್ನುವ ಮೂಲಕ ಫಾಲೋವರ್ಸ್ಗಳಲ್ಲಿ ಕುತೂಹಲ ಹೆಚ್ಚಿಸಿದ್ದಾರೆ.