ರಜನಿಕಾಂತ್ ಅವರ ಧ್ವನಿ ರೈಲು ನಿಲ್ದಾಣಕ್ಕೆ ..ರಜನಿ ಸಲಹೆ ಪ್ರಯಾಣಿಕರಿಗೆ!

ಬುಧವಾರ, 1 ಅಕ್ಟೋಬರ್ 2014 (12:00 IST)
ರೈಲು ನಿಲ್ದಾಣದಲ್ಲಿ ನಾವು ಸಾಮಾನ್ಯವಾಗಿ ಎಲ್ಲಿಂದ ಎಲ್ಲಿಗೆ ಹೋಗುವುದು, ಯಾವ ರೈಲು ಬಂತು, ಯಾವುದು ತಡ ಆಯ್ತು.. ಯಾವುದು ಎಷ್ಟು ಸಮಯಕ್ಕೆ ಸೇರುತ್ತದೆ ಎನ್ನುವ ವಿವರವನ್ನು ಕೆಟ್ಟ, ಕೆಲವು ಬಾರಿ  ಸಾಧಾರಣ ಮತ್ತು ಒಂದಷ್ಟು ಸರ್ತಿ  ಮಧುರವಾದ  ಧ್ವನಿಗಳಿಂದ ಕೇಳುತ್ತಿರುತ್ತೇವೆ. 
 
ಆದರೆ ಅದಕ್ಕೇನು ಮಾಡುವುದಕ್ಕೆ ಆಗಲ್ಲ, ಆದರೆ ಆ ರೈಲಿನ ಬಗ್ಗೆ ನಿಮ್ಮ ಪ್ರಯಾಣ ಸುಖಕರವಾಗಿರಲಿ ಎನ್ನುವ ರೆಕಾರ್ಡೆಡ್ ಮಾತುಗಳು ಸಹಿತ ಕೆಟ್ಟದಾಗಿ ಇದ್ದು ಪ್ರಯಾಣ ಬೇಜಾರಾಗಿ ಹೋಗುವಂತೆ ಮಾಡುತ್ತದೆ. ಈಗ ಅಂತಹ ಬೇಸರ  ಬೇಡ  ಎಂದು ರೈಲ್ವೆ ನಿಲ್ದಾಣದ ಅಧಿಕಾರಿಗಳು ಸೂಪರ್ ಸ್ಟಾರ್ ರಜನಿ ಕಾಂತ್ ಅವರ ಧ್ವನಿಯ ಬಳಕೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. 
 
ಪ್ರಯಾಣಿಕರೆ ರೈಲು ಬರುತ್ತಿರುವಾಗ  ಕಂಬಿ ದಾಟ ಬೇಡಿ .. ಹೀಗೆ ಹತ್ತು ಹಲವಾರು ಸೂಚನೆಗಳು ರಜನಿ ಹೇಳುತ್ತಾರೆ. ಆದರೆ ಅವರು ಹೇಳಲ್ಲ.. ಅಂದರೆ ಗೊಂದಲ ಆಗ್ತಾ ಇದ್ಯಾ? ಚಿಂತೆ ಬೇಡ ಬಿಡಿ.. ಈ ರೀತಿ ರಜನಿಕಾಂತ್ ಧ್ವನಿಯಲ್ಲಿ ರೈಲ್ವೆ ಸಿಬ್ಬಂದಿ ಒಬ್ಬರು ಮಾತಾಡುತ್ತಾರೆ. ಆ ಮೂಲಕ ಜನರಲ್ಲಿ ಚೈತನ್ಯ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ ರೈಲ್ವೆ ಅಧಿಕಾರಿಗಳು. ಇದನ್ನು ರಜನಿಕಾಂತ್ ಅವರ ಬಳಿ ಹೇಳಿದಾಗ ಸಮ್ಮತಿಸಿದ್ದಾರಂತೆ ಸಂತೋಷದಿಂದ..  ....! ಸೊ ಇನ್ನು ಮುಂದೆ ರಜನಿ ಧ್ವನಿಯ ಆಸ್ವಾದ ಮಾಡುವ ಸದವಕಾಶ ಜನರಿಗೆ.. 
 

ವೆಬ್ದುನಿಯಾವನ್ನು ಓದಿ