ಗಾನಗಂಧರ್ವ ಎಸ್ ಪಿ ಬಾಲಸುಬ್ರಮಣ್ಯಂ ಪುಣ್ಯ ತಿಥಿ ಇಂದು

ಶನಿವಾರ, 25 ಸೆಪ್ಟಂಬರ್ 2021 (09:15 IST)
ಬೆಂಗಳೂರು: ಬಹುಭಾಷಾ ಗಾಯಕ, ಗಾನಗಂಧರ್ವ, ಎಲ್ಲರ ಮೆಚ್ಚಿನ ಎಸ್.ಪಿ. ಬಾಲಸುಬ್ರಮಣ್ಯಂ ತೀರಿಕೊಂಡು ಇಂದಿಗೆ ಒಂದು ವರ್ಷವಾಗಿದೆ.


ಕಳೆದ ವರ್ಷ ಕೊರೋನಾ ಬಳಿಕ ಶ್ವಾಸಕೋಶದ ಸೋಂಕಿಗೊಳಗಾಗಿದ್ದ ಎಸ್ ಪಿಬಿ ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅದಾಗಿ ಇಂದಿಗೆ ಒಂದು ವರ್ಷ ತುಂಬಿದೆ.

ಅವರ ನೆನಪುಗಳನ್ನು ಅಭಿಮಾನಿಗಳು, ಗಾಯನ ಲೋಕದ ಹಿತೈಷಿಗಳು ಮೆಲುಕು ಹಾಕಿದ್ದಾರೆ. ಅಸಂಖ್ಯಾತ ಹಾಡುಗಳ ಒಡೆಯ ಎಸ್ ಪಿಬಿ ಒಬ್ಬ ವ್ಯಕ್ತಿಯಾಗಿಯೂ ಆದರ್ಶಪ್ರಾಯರು. ಹೀಗಾಗಿ ಅವರ ಪುಣ್ಯ ತಿಥಿಯಂದು ಅವರಿಲ್ಲದ ಈ ದಿನಗಳ ಬಗ್ಗೆ ಅನೇಕರು ತಮ್ಮ ನೆನಪುಗಳನ್ನು ಹೊರಹಾಕುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ