ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ ಸ್ಪರ್ಶ ನಟಿ ರೇಖಾ

ಮಂಗಳವಾರ, 5 ಜುಲೈ 2022 (08:50 IST)
ಬೆಂಗಳೂರು: ಸ್ಪರ್ಶ ಹೀರೋಯಿನ್ ರೇಖಾ ಯಾರಿಗೆ ಗೊತ್ತಿಲ್ಲ ಹೇಳಿ? ರೇಖಾ ಈಗ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.

ಇತ್ತೀಚೆಗೆ ಸ್ಯಾಂಡಲ್ ವುಡ್ ಕಲಾವಿದರು ಕಿರುತೆರೆಗೆ ಬಂದು ಪ್ರಮುಖ ಪಾತ್ರ ಮಾಡುವುದು ಟ್ರೆಂಡ್ ಆಗಿಬಿಟ್ಟಿದೆ. ಈಗಾಗಲೇ ನಟಿ ಸುಧಾರಾಣಿ ಹೊಸ ಧಾರವಾಹಿಯ ನಾಯಕಿಯಾಗುತ್ತಿದ್ದಾರೆ. ಹಿರಿಯ ಕಲಾವಿದೆ ಉಮಾಶ್ರೀ ಪುಟ್ಟಕ್ಕನಾಗಿ ಧಾರವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.

ಇದೀಗ ಆ ಸಾಲಿಗೆ ನಟಿ ರೇಖಾ ಸೇರಿಕೊಳ್ಳಲಿದ್ದಾರಂತೆ. ಸದ್ಯದಲ್ಲೇ ನಟಿ ರೇಖಾ ಕಿರುತೆರೆಯ ಹೊಸ ಧಾರವಾಹಿಯೊಂದರಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಬಂದಿದೆ. ರೇಖಾ ಈ ಮೊದಲೂ ಬಿಗ್ ಬಾಸ್ ಶೋ, ಕೆಲವು ಧಾರವಾಹಿಗಳಲ್ಲಿ ಅತಿಥಿ ಪಾತ್ರ ಮಾಡಿದ್ದರು. ಇದೀಗ ಧಾರವಾಹಿಯೊಂದರಲ್ಲಿ ಪ್ರಮುಖ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿಯಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ