ಚಿಕಿತ್ಸೆಗೆ ಸ್ಪಂದಿಸುತ್ತಿರುವ ಎಸ್ಪಿಬಿ : ನಟ ರಜನಿಕಾಂತ್ ಖುಷ್

ಸೋಮವಾರ, 17 ಆಗಸ್ಟ್ 2020 (22:53 IST)
ಅನಾರೋಗ್ಯ ಹಾಗೂ ಕೊರೊನಾ ಪಾಸಿಟಿವ್ ನಿಂದ ಆಸ್ಪತ್ರೆಗೆ ದಾಖಲಾಗಿರುವ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.

ಎಸ್ ಪಿ ಬಿ ವೆಂಟಿಲೇಟರ್ ಸಹಾಯವಿಲ್ಲದೇ ಉಸಿರಾಡುತ್ತಿದ್ದು, ಅವರ ಆರೋಗ್ಯ ಚೇತರಿಕೆ ಕಾಣುತ್ತಿದೆ.

ಈ ವಿಷಯ ತಿಳಿದ ನಟ ರಜನಿಕಾಂತ್ ಸಂತಸ ವ್ಯಕ್ತಪಡಿಸಿದ್ದಾರೆ.

ವಿಡಿಯೋ ವನ್ನು ಶೇರ್ ಮಾಡಿಕೊಂಡಿರುವ ನಟ ರಜನಿಕಾಂತ್,  ಅಪಾಯದಿಂದ ಎಸ್ ಬಿಪಿ ಪಾರಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದು, ಬಹುಭಾಷಾ ಗಾಯಕ ಶೀಘ್ರವಾಗಿ ಚೇತರಿಕೆ ಹೊಂದಲಿ ಎಂದು ಶುಭ ಹಾರೈಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ