ರತ್ನಜ ಸ್ಪೆಷಲ್ ಗಿಫ್ಟ್

ಬುಧವಾರ, 2 ಸೆಪ್ಟಂಬರ್ 2015 (10:52 IST)
ನಿರ್ದೇಶಕ ರತ್ನಜ ಲಾಂಗ್ ಗ್ಯಾಪ್ ನ ಬಳಿಕ ಭರ್ಜರಿಯಾಗಿ ಕಮ್ ಬ್ಯಾಕ್ ಮಾಡೋದಕ್ಕೆ ರೆಡಿಯಾಗಿದ್ದಾರೆ. ಐದು ವರ್ಷಗಳ ನಂತ್ರ ಮತ್ತೆ ಗಾಂಧಿನಗರದಲ್ಲಿ ಕಾಣಿಸಿಕೊಂಡಿರೋ ರತ್ನಜ ಈಬಾರಿ ನೇರವಾಗಿ ಸಿನಿಮಾ ಥಿಯೇಟರ್ ನಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಪ್ರೀತಿಯಲ್ಲಿ ಸಹಜ ಅನ್ನೋ ಸಿನಿಮಾವೊಂದನ್ನ ನಿರ್ದೇಶಿಸ್ತಿದ್ದಾರೆ. ಇದೀಗ ಚಿತ್ರೀಕರಣ ಮುಗಿದಿದ್ದು ಚಿತ್ರದ ಮೊದಲ ಭಾಗವಾಗಿ ಆಡಿಯೋ ರಿಲೀಸ್ ಮಾಡಿದ್ದಾರೆ. ಮುದ್ದಾದ ಜೊಡಿಯೊಂದನ್ನ ಇಟ್ಟುಕೊಂಡು ರೋಮ್ಯಾಂಟಿಕ್ ಲೊಕೇಷನ್ ನಲ್ಲಿ ರತ್ನಜ ಸಾಂಗ್ ಶೂಟಿಂಗ್ ಮಾಡಿದ್ದಾರೆ.
ಪ್ರೇಮಿಸಂ ನಂತ್ರ ಮತ್ಯಾವ ಪ್ರಾಜೆಕ್ಟ ಗಳನ್ನ ಕೈಗೆತ್ತಿಕೊಳ್ಳದ ರತ್ನಜ, ಈ ಬಾರಿ ಪ್ರೀತಿಯಲ್ಲಿ ಸಹಜ ಚಿತ್ರದ ಮೂಲಕ ಮತ್ತೆ ಯಶಸ್ಸಿನ ಟ್ರ್ಯಾಕ್ ಗೆ ಬರೋದಕ್ಕೆ ರೆಡಿಯಾಗಿದ್ದಾರೆ. ಹೊಂಗನಸು ಮತ್ತು ನೆನಪಿರಲಿ ನಂತಹ ಸೂಪರ್ ಹಿಟ್ ಚಿತ್ರಗಳನ್ನ ಕೊಟ್ಟಿದ್ದ ರತ್ನಜ ಈಗ ಅಂತಹದ್ದೇ ಹಿಟ್ ಚಿತ್ರಕೊಡುವ ಭರವಸೆ ಮೂಡಿಸಿದ್ದಾರೆ.
 
ಪ್ರೀತಿಯಲ್ಲಿ ಸಹಜ ಆಡಿಯೋ ರಿಲೀಸ್ ಆಗಿದ್ದು ಕೇಳೋದಕ್ಕೆ ಹಾಡುಗಳು ಇಂಪಾಗಿವೆ. ಇನ್ನು ಚಿತ್ರಕ್ಕೆ ಹಂಸಲೇಖ ಅವರ ಶಿಷ್ಯ ರವಿರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ನಾಯಕನಾಗಿ ಸೂರ್ಯ ಮತ್ತು ನಾಯಕಿ ಆಗಿ ಅಕ್ಷಾ ಭಟ್ ನಟಿಸಿರೋ ಸಿನಿಮಾ ರತ್ನಜರ ಮತ್ತೊಂದು ಲವ್ ಒರಿಯೆಂಟೆಡ್ ಸಿನಿಮಾವಾಗಿದೆ. ಅಲ್ಲದೆ ಚಿತ್ರದಲ್ಲಿ ದೇವರಾಜ್ ಮತ್ತು ರಘುಮುಖರ್ಜಿಯಂತಹ ಬಿಗ್ ಸ್ಟಾರ್ ಗಳು ಅಭಿನಯಿಸಿರೋದು ವಿಶೇಷ.

ವೆಬ್ದುನಿಯಾವನ್ನು ಓದಿ