ರಾಮ್ ಲೀಲಾ ಸಿನಿಮಾದ ಸ್ಪೆಷಲ್ ಸಾಂಗ್ ಲಾಂಚ್

ಬುಧವಾರ, 28 ಅಕ್ಟೋಬರ್ 2015 (11:10 IST)
ಕ್ಯೂಟ್ ಗರ್ಲ್ ಅಮೂಲ್ಯ ಹಾಗೂ ಚಿರಜೀವಿ ಸರ್ಜಾ ಅಭಿನಯಿಸುತ್ತಿರುವ ಸಿನಿಮಾ ರಾಮ್ ಲೀಲಾ. ಈಗಾಗಲೇ ಟ್ರೇಲರ್ ನಿಂದ ಗಮನ ಸೆಳೆದಿರುವ ಈ ಸಿನಿಮಾ ಇದೀಗ ಮತ್ತೆ ಸುದ್ದಿಯಲ್ಲಿದೆ. ಅದಕ್ಕೆ ಕಾರಣ ಮೊನ್ನೆ ರಿಲೀಸ್ ಆಗಿರುವ ಸಿನಿಮಾದ ಸಾಂಗ್. 
ಈ ಹಿಂದೆ ಸಿನಿಮಾದ ಟ್ರೇಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕೈಯಿಂದ ರಿಲೀಸ್ ಮಾಡಿಸಿತ್ತು ಸಿನಿಮಾ ತಂಡ. ಬಳಿಕ ಉಪೇಂದ್ರ ದಂಪತಿಯಿಂದ ಸಿನಿಮಾದ ಹಾಡೊಂದನ್ನು ರಿಲೀಸ್ ಮಾಡಿಸಲಾಗಿತ್ತು. ಇದೀಗ ಸಿನಿಮಾ ತಂಡ ಚಿತ್ರದ ಮತ್ತೊಂದು 
ಹಾಡನ್ನು ರಿಲೀಸ್ ಮಾಡಿದೆ. ಅದು ಸಿನಿಮಾದ ಸ್ಪೆಷಲ್ ಸಾಂಗ್ ಅಮೂಲ್ಯ ಸಾಂಗ್.
 
ಅಂದ್ಹಾಗೆ ಸಿನಿಮಾದ ಈ ಸ್ಪೆಷಲ್ ಸಾಂಗ್ ನ್ನು ರಿಲೀಸ್ ಮಾಡಿರೋದು ಗೋಲ್ಡನ್ ಸ್ಟಾರ್ ಗಣೇಶ್. ಅನೂಪ್ ರೂಬಿನ್ಸ್ ಈ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ. ಮುರಳಿ ಮಾಸ್ಟರ್ ಕೊರಿಯೋಗ್ರಫಿ ಮಾಡಿರುವ ಈ ಸಾಂಗ್ ಸಖತ್ತಾಗಿ ಮೂಡಿ ಬಂದಿದೆ. ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದಾರೆ. ವಿಜಯ್ ಕಿರಣ್ ಸಿನಮಾವನ್ನು ನಿರ್ದೇಶಿಸಿದ್ದು, ಸೌಂದರ್ಯ ಜಗದೀಶ್ ಬಂಡವಾಳ ಹೂಡಿದ್ದಾರೆ,
-

ವೆಬ್ದುನಿಯಾವನ್ನು ಓದಿ