ಟಾಲಿವುಡ್ ನಲ್ಲಿ ಬ್ಯುಸಿಯಾಗಿರುವ ಶ್ರೀಲೀಲಾ ಒಪ್ಪಿಕೊಂಡ ಸಿನಿಮಾಗಳೆಷ್ಟು?

ಶನಿವಾರ, 12 ಆಗಸ್ಟ್ 2023 (08:20 IST)
ಹೈದರಾಬಾದ್: ಕನ್ನಡದಿಂದ ತೆಲುಗಿಗೆ ಹಾರಿದ ನಟಿ ಶ್ರೀಲೀಲಾ ಈಗ ಟಾಲಿವುಡ್ ನಲ್ಲೇ ಪ್ರಮುಖ ಹೀರೋಯಿನ್ ಗಳಿಗೆ ಠಕ್ಕರ್ ಕೊಡುವಷ್ಟು ಬ್ಯುಸಿಯಾಗಿದ್ದಾರೆ.

ಕನ್ನಡದಲ್ಲಿ ನಾಲ್ಕು ಸಿನಿಮಾಗಳನ್ನು ಮಾಡಿರುವ ಶ್ರೀಲೀಲಾ ತೆಲುಗಿನಲ್ಲಿ ನಟಿಸಿರುವ ಎರಡು ಸಿನಿಮಾಗಳು ಬಿಡುಗಡೆಯಾಗಿವೆ. ಈ ಸಿನಿಮಾಗಳಿಂದ ಟಾಲಿವುಡ್ ಮಂದಿ ಶ್ರೀಲೀಲಾಗೆ ಕ್ಲೀನ್ ಬೌಲ್ಡ್ ಆಗಿದ್ದಾರೆ.

ಈಗ ಶ್ರೀಲೀಲಾ ಕೈಯಲ್ಲಿ ಒಟ್ಟು ಎಂಟು ತೆಲುಗು ಸಿನಿಮಾಗಳಿವೆ. ಈ ಪೈಕಿ ಎರಡು ಸಿನಿಮಾಗಳು ಪೂರ್ತಿಯಾಗಿದ್ದು, ಬಿಡುಗಡೆಗೆ ಸಿದ್ಧವಿದೆ. ಉಳಿದಂತೆ ಆರು ಸಿನಿಮಾಗಳು ಚಿತ್ರೀಕರಣ ಹಂತದಲ್ಲಿದೆ. ಮಹೇಶ್ ಬಾಬು, ಪವನ್ ಕಲ್ಯಾಣ್, ರಾಮ್ ಪೊತಿನೇನಿ ಸೇರಿದಂತೆ ಸ್ಟಾರ್ ನಟರ ಸಿನಿಮಾಗಳಿಗೆ ಶ್ರೀಲೀಲಾ ನಾಯಕಿ. ಸದ್ಯಕ್ಕೆ ಕನ್ನಡಕ್ಕೆ ಬರಲಾಗದಷ್ಟು ಬ್ಯುಸಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ