ಜೈಲರ್ ಫಸ್ಟ್ ಡೇ ಫಸ್ಟ್ ಶೋ ರಿವ್ಯೂ: ಥಿಯೇಟರ್ ನಲ್ಲಿ ರಜನಿ ಮೇನಿಯಾ
ಜೈಲರ್ ಸಿನಿಮಾದ ಮೊದಲ ಶೋ ನೋಡಿದ ಪ್ರೇಕ್ಷಕರು ಸೂಪರ್ ಆಗಿದೆ ಎಂದು ಹೇಳಿದ್ದಾರೆ. ಮೊದಲಾರ್ಧದಲ್ಲಿ ತಲೈವರ್ ಎಂಟ್ರಿಯೇ ಅದ್ಭುತವಾಗಿದೆ. ಅದಕ್ಕೆ ತಕ್ಕ ಹಿನ್ನಲೆ ಸಂಗೀತವಿದೆ. ಇಂಟರ್ ವೆಲ್ ನಲ್ಲಿ ಮುಂದೇನು ಎಂಬ ಕುತೂಹಲ ಕಾಯ್ದಿರಿಸುತ್ತದೆ.
ಇನ್ನು ತಮ್ಮ ಮೆಚ್ಚಿನ ನಟ ರಜನಿ ಸಿನಿಮಾ ಬಿಡುಗಡೆಯಾದ ಖುಷಿಯಲ್ಲಿ ಅಭಿಮಾನಿಗಳು ಥಿಯೇಟರ್ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಜೊತೆಗೆ ಮೊದಲ ಶೋ ನೋಡಲು ಅಭಿಮಾನಿಗಳು ನೂಕುನುಗ್ಗಲು ನಡೆಸಿದ್ದಾರೆ. ಇದೀಗ ಮೊದಲ ದಿನ ಎಷ್ಟು ಕೋಟಿ ಬಾಚಿಕೊಳ್ಳುತ್ತದೆ ನೋಡಬೇಕಿದೆ.