25 ವರ್ಷ ದಾಂಪತ್ಯ ಮುರಿದುಕೊಂಡರಾ ಶ್ರೀಕಾಂತ್? ನಟನ ಪ್ರತಿಕ್ರಿಯೆಯೇನು?

ಬುಧವಾರ, 23 ನವೆಂಬರ್ 2022 (09:06 IST)
Photo Courtesy: Twitter
ಹೈದರಾಬಾದ್: ಕನ್ನಡ ಮೂಲದ ತೆಲುಗು ನಟ ಶ್ರೀಕಾಂತ್ ತಮ್ಮ 25 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ತೀರ್ಮಾನಿಸಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಬಗ್ಗೆ ನಟ ಪ್ರತಿಕ್ರಿಯೆ ನೀಡಿದ್ದಾರೆ.

ಶ್ರೀಕಾಂತ್ ಪತ್ನಿ ಊಹಾ ನಡುವೆ ಹಣಕಾಸಿನ ವಿಚಾರವಾಗಿ ಭಿನ್ನಾಭಿಪ್ರಾಯಗಳಾಗಿತ್ತು. ಈ ಹಿನ್ನಲೆಯಲ್ಲಿ ಇಬ್ಬರೂ ಬೇರೆಯಾಗಲು ತೀರ್ಮಾನಿಸಿದ್ದಾರೆ ಎಂಬ ಸುದ್ದಿಯಾಗಿತ್ತು.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ಶ್ರೀಕಾಂತ್, ‘ನನ್ನ ಪತ್ನಿ ವಿಚ್ಛೇದನದ ರೂಮರ್ ಬಗ್ಗೆ ಕೇಳಿದಾಗ ಕುಸಿದು ಕಣ್ಣೀರು ಹಾಕಿದ್ದಳು. ಇಂತಹ ಸುದ್ದಿಗಳಿಗೆಲ್ಲಾ ಕಿವಿಗೊಡಬಾರದು ಎಂದು ಅವಳಿಗೆ ಸಮಾಧಾನಿಸಬೇಕಾಯಿತು. ಇಂತಹ ಸುಳ್ಳು ಸುದ್ದಿ ಹರಡಿದವರ ವಿರುದ್ಧ ಸೈಬರ್ ಪೊಲೀಸರಿಗೆ ದೂರು ನೀಡುತ್ತೇನೆ’ ಎಂದು ಶ್ರೀಕಾಂತ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ