ಮನೆ ಬಾಡಿಗೆ ಕಟ್ಟುವುದಕ್ಕೂ ಕಷ್ಟವಾಗಿತ್ತು! ಕಷ್ಟದ ದಿನ ನೆನೆಸಿಕೊಂಡ ರಶ್ಮಿಕಾ

ಬುಧವಾರ, 16 ನವೆಂಬರ್ 2022 (09:10 IST)
ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಇಂದು ಟಾಲಿವುಡ್ ನ ನಂ.1 ನಟಿಯಾಗಿ ಮಿಂಚುತ್ತಿರಬಹುದು. ಆದರೆ ಬಾಲ್ಯದಲ್ಲಿ ತಮಗೆ ದಿನ ಕಳೆಯುವುದೂ ಕಷ್ಟವಾಗಿತ್ತು ಎಂದು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ನನ್ನ ಬಾಲ್ಯದಲ್ಲಿ ಅಪ್ಪ-ಅಮ್ಮನಿಗೆ ಮನೆ ಬಾಡಿಗೆ ಕಟ್ಟುವುದಕ್ಕೂ ಹಣವಿರುತ್ತಿರಲಿಲ್ಲ. ಹೀಗಾಗಿ ಎರಡು ತಿಂಗಳಿಗೊಮ್ಮೆ ನಾವು ಮನೆ ಬದಲಾಯಿಸುತ್ತಿದ್ದೆವು. ನನಗೆ ಆಗಲೇ ನಮ್ಮ ಅಪ್ಪ-ಅಮ್ಮನ ಕಷ್ಟ ಅರ್ಥವಾಗುತ್ತಿತ್ತು.

ನನ್ನ ತಂದೆ ತಾಯಿ ಯಾವತ್ತೂ ನನ್ನ ಆಸೆಗಳಿಗೆ ನೋ ಎಂದವರಲ್ಲ. ಆದರೆ ನನಗೆ ಗೊತ್ತಿತ್ತು. ನನಗೆ ಒಂದು ಆಟಿಕೆ ತಂದುಕೊಡಲೂ ಅವರಿಗೆ ಹಣವಿಲ್ಲದೇ ಕಷ್ಟವಾಗುತ್ತಿತ್ತು. ಹೀಗಾಗಿ ನಾನು ಹೆಚ್ಚು ಡಿಮ್ಯಾಂಡ್ ಮಾಡ್ತಿರಲಿಲ್ಲ. ನನ್ನ ಬಾಲ್ಯದ ಕಷ್ಟಗಳಿಂದಾಗಿ ಯಶಸ್ಸನ್ನು ನಾನು ಹಗುರವಾಗಿ ತೆಗೆದುಕೊಳ್ಳಲ್ಲ. ಹಣದ ಬೆಲೆ ಏನೆಂದು ನನಗೆ ಗೊತ್ತು’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ