ರಚಿತಾ ರಾಂಗೆ 10 ಕೋಟಿ ಕಾರು ಗಿಫ್ಟ್ ಕೊಟ್ಟ ಶ್ರೀನಗರ ಕಿಟ್ಟಿ!
ಈಗ ರಚಿತಾ ರಾಂಗೆ ಶ್ರೀನಗರ ಕಿಟ್ಟಿ 10 ಕೋಟಿ ರೂ. ಬೆಲೆ ಬಾಳುವ ಕಾರು ಗಿಫ್ಟ್ ನೀಡಿದ್ದಾರೆ! ಆದರೆ ಇದು ನಿಜ ಜೀವನದಲ್ಲಿ ಅಲ್ಲ. ಸಂಜು ವೆಡ್ಸ್ ಗೀತಾ ಸಿನಿಮಾದಲ್ಲಿ.
ಕನಕಪುರ ಬಳಿಯ ಫಾರ್ಮ್ ಹೌಸ್ ನಲ್ಲಿ ಸಂಜು ವೆಡ್ಸ್ ಗೀತಾ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಈ ವೇಳೆ ನಾಯಕ ವೆಡ್ಡಿಂಗ್ ಆನಿವರ್ಸರಿ ನಿಮಿತ್ತ ನಾಯಕಿಗೆ 10 ಕೋಟಿ ರೂ. ಬೆಲೆಬಾಳುವ ಕಾರು ಗಿಫ್ಟ್ ನೀಡುವ ದೃಶ್ಯ ಚಿತ್ರೀಕರಣ ಮಾಡಲಾಯಿತು.
ರಮ್ಯಾ-ಶ್ರೀನಗರ ಕಿಟ್ಟಿ ಕಾಂಬಿನೇಷನ್ ನಲ್ಲಿ ಸಂಜು ವೆಡ್ಸ್ ಗೀತಾ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೇ ಹುರುಪಿನಲ್ಲಿ ಚಿತ್ರತಂಡ ಇಷ್ಟು ವರ್ಷದ ಬ್ರೇಕ್ ನ ನಂತರ ಎರಡನೇ ಭಾಗ ನಿರ್ಮಿಸುತ್ತಿದೆ. ಮುಂದಿನ ವರ್ಷ ಏಪ್ರಿಲ್ 1 ರಂದು ಚಿತ್ರ ಬಿಡುಗಡೆ ಮಾಡುವ ಪ್ಲ್ಯಾನ್ ಚಿತ್ರತಂಡದ್ದು. ಅದಕ್ಕೆ ಮೊದಲು ನಿರ್ಮಾಪಕ ಚಲವಾದಿ ಕುಮಾರ್ ಹುಟ್ಟುಹಬ್ಬ ನಿಮಿತ್ತ ಡಿಸೆಬಂರ್ 29 ರಂದು ಚಿತ್ರದ ಟ್ರೈಲರ್ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ.