ಯಕ್ಷಗಾನದಲ್ಲೂ ‘ಪುಷ್ಪ’ ಶ್ರೀವಲ್ಲಿ ಮೋಡಿ!
ಬಪ್ಪನಾಡು ಮೇಳದ ಯಕ್ಷಗಾನ ಬಯಲಾಟವೊಂದರಲ್ಲಿ ಭಾಗವತರು ಶ್ರೀವಲ್ಲಿ ಹಾಡಿನ ಕನ್ನಡ ಅವತರಣಿಕೆಯನ್ನು ಹಾಡುತ್ತಾರೆ. ಇದಕ್ಕೆ ಹಾಸ್ಯ ಕಲಾವಿದ ಶ್ರೀವಲ್ಲಿ ಸಿಗ್ನೇಚರ್ ಸ್ಟೆಪ್ಸ್ ಹಾಕಿ ರಂಗಸ್ಥಳದಲ್ಲಿ ಕುಣಿದು ನೋಡುಗರನ್ನು ರಂಜಿಸಿದ್ದಾರೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೂ ಮೊದಲು ಪುಷ್ಪ ಸಿನಿಮಾವನ್ನು ಟಾಮ್ ಆಂಡ್ ಜೆರ್ರಿ ಹಾವ ಭಾವಕ್ಕೆ ಹೋಲಿಸಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಯಬಿಡಲಾಗಿತ್ತು. ಇದೀಗ ಯಕ್ಷಗಾನಕ್ಕೂ ಶ್ರೀವಲ್ಲಿ ಹಾಡಿನ ಮೋಡಿ ಕಾಲಿಟ್ಟಿದೆ.