ಥಿಯೇಟರ್ ತೆರೆದರೆ ಸಿನಿಮಾಗಳ ಟ್ರಾಫಿಕ್ ಜಾಮ್

ಗುರುವಾರ, 10 ಜೂನ್ 2021 (08:49 IST)
ಬೆಂಗಳೂರು: ಎರಡನೇ ಲಾಕ್ ಡೌನ್ ಬಳಿಕ ಮತ್ತೆ ಥಿಯೇಟರ್ ಪೂರ್ಣ ಪ್ರಮಾಣದಲ್ಲಿ ಯಾವಾಗ ತೆರೆಯುತ್ತದೋ ಎಂದು ಸಿನಿಮಾ ನಿರ್ಮಾಪಕರು ಎದಿರು ನೋಡುವಂತಾಗಿದೆ.


ಮತ್ತೆ ಥಿಯೇಟರ್ ತೆರೆದಾಗ ಮತ್ತೊಮ್ಮೆ ಸಾಲು ಸಾಲು ಸಿನಿಮಾಗಳ ಟ್ರಾಫಿಕ್ ಜಾಮ್ ಆಗೋದು ಖಂಡಿತಾ. ಲಾಕ್ ಡೌನ್ ನಿಂದಾಗಿ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗದೇ ಉಳಿದಿದೆ. ಅದರಲ್ಲೂ ಸ್ಟಾರ್ ನಟರ ಬಿಗ್ ಬಜೆಟ್ ಸಿನಿಮಾಗಳೇ ಬಿಡುಗಡೆಗೆ ಕಾದು ಕುಳಿತಿವೆ.

ಕಿಚ್ಚ ಸುದೀಪ್ ರ ಕೋಟಿಗೊಬ್ಬ 3, ವಿಕ್ರಾಂತ್ ರೋಣ, ರಾಕಿಂಗ್ ಸ್ಟಾರ್ ಯಶ್ ರ ಕೆಜಿಎಫ್ 2, ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್, ದುನಿಯಾ ವಿಜಯ್ ರ ಸಲಗ, ಶಿವರಾಜ್ ಕುಮಾರ್ ಅವರ ಭಜರಂಗಿ 2 ಹೀಗೆ ಸಾಲು ಸಾಲು ಸ್ಟಾರ್ ನಟರ ಸಿನಿಮಾಗಳೇ ಬಿಡುಗಡೆಯಾಗಲಿವೆ. ಹೀಗಾಗಿ ಮತ್ತೆ ನಿರ್ಮಾಪಕರು ಮಾತುಕತೆ ನಡೆಸಿ ಮೊದಲಿನಂತೆ ಒಂದಕ್ಕೊಂದು ಸಿನಿಮಾಗಳು ಕ್ಲ್ಯಾಶ್ ಆಗದಂತೆ ಎಚ್ಚರಿಕೆಯಿಂದ ಸಿನಿಮಾಗಳನ್ನು ಬಿಡುಗಡೆ ಮಾಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ