ಪ್ರಶಾಂತ್ ನೀಲ್ ವ್ಯಾಕ್ಸಿನ್ ಹಾಕಿದ್ದಕ್ಕೆ ಬಾಲಿವುಡ್ ನಟಿ ರವೀನಾ ಟಂಡನ್ ಕಾಲೆಳೆದಿದ್ದೇಕೆ?

ಬುಧವಾರ, 9 ಜೂನ್ 2021 (09:06 IST)
ಬೆಂಗಳೂರು: ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಕೊರೋನಾಗೆ ವ್ಯಾಕ್ಸಿನ್ ಪಡೆದ ವಿಚಾರವನ್ನು ಫೋಟೋ ಸಮೇತ ಪ್ರಕಟಿಸಿ ಟ್ರೋಲ್ ಗೊಳಗಾಗಿದ್ದಾರೆ.


ಫ್ಯಾನ್ಸ್ ಮಾತ್ರವಲ್ಲ, ಕೆಜಿಎಫ್ ನಟಿ, ಬಾಲಿವುಡ್ ನ ರವೀನಾ ಟಂಡನ್ ಕೂಡಾ ಪ್ರಶಾಂತ್ ಕಾಲೆಳೆದಿದ್ದಾರೆ. ಇದಕ್ಕೆ ಕಾರಣ ವ್ಯಾಕ್ಸಿನ್ ಪಡೆಯುವಾಗ ಪ್ರಶಾಂತ್ ಕೈಗಳಿಂದ ಕಣ್ಣು ಮುಚ್ಚಿಕೊಂಡು ಪೋಸ್ ಕೊಟ್ಟಿರುವುದು.

ಇದನ್ನು ನೋಡಿ ರವೀನಾ ಟಂಡನ್, ‘ಇದು ಕ್ಯೂಟ್ ಆಗಿದೆ ಪ್ರಶಾಂತ್, ನೀವು ನನ್ನ ವ್ಯಾಕ್ಸಿನ್ ವಿಡಿಯೋ ನೋಡಬೇಕಿತ್ತು. ಎಲ್ಲಾ ಧೈರ್ಯವಂತರಿಗಾಗಿ’ ಎಂದು ಕಾಲೆಳೆದಿದ್ದಾರೆ. ಇದಕ್ಕೆ ಪ್ರಶಾಂತ್ ಕೂಡಾ ಪ್ರತಿಕ್ರಿಯಿಸಿದ್ದು, ಬಹುಶಃ ನಾನು ಆ ವಿಡಿಯೋ ನೋಡಬೇಕಿತ್ತು, ಅದು ಎಲ್ಲರಿಗೂ ಸ್ಪೂರ್ತಿಯಾಗಿರುತ್ತಿತ್ತು. ನನ್ನ ಫೋಟೋ ಯಾರಿಗೂ ಸ್ಪೂರ್ತಿಯಾಗಲ್ಲ’ ಎಂದಿದ್ದಾರೆ.

ಇನ್ನು, ಫ್ಯಾನ್ಸ್ ಕೂಡಾ ಪ್ರಶಾಂತ್ ಟ್ರೋಲ್ ಮಾಡಿದ್ದು, ಇಂಜಕ್ಷನ್ ಅಂದರೆ ಅಷ್ಟೊಂದು ಭಯನಾ? ಇನ್ನೂ ಚುಚ್ಚಿಯೇ ಇಲ್ಲ, ಆಗಲೇ ಕಣ್ಣು ಮುಚ್ಚಿಕೊಂಡಿದ್ದೀರಾ? ಎಂದು ತಮಾಷೆ ಮಾಡಿದ್ದಾರೆ. ಮತ್ತೆ ಕೆಲವರು ಪ್ರಶಾಂತ್ ಫೋಟೋವನ್ನು ಪ್ರಕಟಿಸಿ, ಈ ಫೋಟೋದಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಿರುವ ಸೆಲೆಬ್ರಿಟಿ ಯಾರಿರಬಹುದು ಊಹೆ ಮಾಡಿ ನೋಡೋಣ ಎಂದು ಕಾಲೆಳೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ