ಮೊದಲು ಅನುಷ್ಕಳಿಗೇನೂ ಗೊತ್ತಿರಲಿಲ್ಲ! ಈಗ ಎಲ್ಲಾ ಗೊತ್ತಾಗಿದೆಯಂತೆ!!

ಶನಿವಾರ, 29 ನವೆಂಬರ್ 2014 (12:41 IST)
ನಾನು ನಿರ್ದೇಶಕರು ಹೇಳಿದಂತೆ ಅಭಿನಯಿಸುತ್ತೇನೆ. ಆ ಪಾತ್ರದ ಬಗ್ಗೆ ತಿಳಿಸಿದಾಗ ಆ ರೀತಿ ನಾನು ನಿಜವಾಗಿಯೂ ಆದರೆ ಹೇಗಿರುತ್ತದೆ ಎಂದು ಕಲ್ಪಿಸಿಕೊಳ್ಳುತ್ತೇನೆ. ಹಾಗೆಂದು ನಾನು ನನ್ನ ಶೈಲಿಯನ್ನು ಎಂದಿಗೂ ಬಿಡುವುದಿಲ್ಲ ಎಂದು ಹೇಳಿದ್ದಾಳೆ ಅನುಷ್ಕ ಶೆಟ್ಟಿ.
 
ಬಾಹುಬಲಿ, ರುದ್ರಮ ದೇವಿ, ಲಿಂಗಾ ಎನ್ನಿ ಅರಿಂದಾಲ್ ಹೀಗೆ ತೆಲುಗು, ತಮಿಳು ಭಾಷೆಗಳ ಸಿನಿಮಾಗಳ ನಟನೆಯಲ್ಲಿ ಬ್ಯುಸಿ ಆಗಿರುವ ಅನುಷ್ಕ ಶೆಟ್ಟಿ ತಾನು ಈ ಚಿತ್ರರಂಗಕ್ಕೆ ಎಂಟ್ರಿ ಆದರ ಆರಂಭಿಕ ಹಂತವನ್ನು ನೆನಪಿಸಿಕೊಳ್ಳುತ್ತಾ ಸಿನಿಮಾ ನಿರ್ಮಾಣದ ಬಗ್ಗೆ ತನಗೆ ಯಾವುದೇ ರೀತಿಯ ಅರಿವು ಇರಲಿಲ್ಲ, ನಾನು ಅತ್ಯಂತ ಸರಳ ಸಾಧಾರಣ ಹೆಣ್ಣು ಮಗಳಾಗಿದ್ದೆ. 
 
ಮೇಕಪ್ ಬಗ್ಗೆ ಏನು ಗೊತ್ತಿರದ ಹುಡುಗಿ ನಾನು. ಇನ್ನು ಕ್ಯಾಮರ ಬಗ್ಗೆ ಹೇಗೆ ತಾನೇ ಗೊತ್ತಿರೋಕೆ ಸಾಧ್ಯ ? ಆದರೆ ನಾಲ್ಕೈದು ಚಿತ್ರಗಳಲ್ಲಿ ನಟಿಸಿದ ಬಳಿಕ ನನಗೆ ಸಿನಿಮಾ ಮೇಕಿಂಗ್ ಬಗ್ಗೆ ಅರಿವು ಬಂತು.ಅದೇ ರೀತಿ ಕ್ಯಾಮರಾದ ಆಂಗಲ್ಸ್ ಬಗ್ಗೆ ಸಹಿತ ಗೊತ್ತಾಗಲು ಆರಂಭವಾಯ್ತು. ಅಂದಿನಿಂದ ನನ್ನದೇ ಆದ ಶೈಲಿಗೆ ಆದ್ಯತೆ ನೀಡಲು ಆರಂಭ ಮಾಡಿದೆ ಎಂದಿದ್ದಾಳೆ  ಅನುಷ್ಕ. 
 
ನನ್ನ ಸಹ  ನಟಿಯರು ಈಗಾಗಲೇ  ಬಾಲಿವುಡ್ ನಲ್ಲಿ ಇದ್ದಾರೆ. ನನಗೂ ಅಲ್ಲಿ ನಟಿಸಲು ಸಾಕಷ್ಟು ಅವಕಾಶಗಳು ಬಂತು. ಆದರೆ ಅಲ್ಲಿ ದೊರೆತ ಅವಕಾಶ ಹೊಸತು ಅನ್ನಿಸಲಿಲ್ಲ. ಆದ್ದರಿಂದ ನಟಿಸಲು ಒಪ್ಪಿಕೊಳ್ಳಲಿಲ್ಲ ಎಂದು ಹೇಳಿದ್ದಾಳೆ ಈ ಚೆಲುವೆ. 
 

ವೆಬ್ದುನಿಯಾವನ್ನು ಓದಿ