2014ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ

ಶನಿವಾರ, 13 ಫೆಬ್ರವರಿ 2016 (12:48 IST)
2014ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದೆ. ನಾನು ಅವನಲ್ಲ ಅವಳು ಸಿನಿಮಾಗಾಗಿ ನಟ ಸಂಚಾರಿ ವಿಜಯ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡ್ರೆ, ವಿದಾಯ ಸಿನಿಮಾದ ನಟನೆಗಾಗಿ ನಟಿ ಲಕ್ಷ್ಮೀ ಗೋಪಾಲಸ್ವಾಮಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹರಿವು ಸಿನಿಮಾ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದ್ರೆ, ದ್ವಿತೀಯ ಅತ್ಯುತ್ತಮ ಚಿತ್ರವಾಗಿ ಅಭಿಮನ್ಯ ಸಿನಿಮಾ ಪ್ರಶಸ್ತಿ ಬಾಚಿಕೊಂಡಿದೆ.

ಇನ್ನುಳಿದಂತೆ ಬಸಂತ್ ಕುಮಾರ್ ಪಾಟೀಲ್ ಅವರಿಗೆ ಡಾ.ರಾಜ್ ಕುಮಾರ್ ಪ್ರಶಸ್ತಿ, ಡಾ.ಬರಗೂರು ರಾಮಚಂದ್ರಪ್ಪ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಡಾ.ವಿಷ್ಣುವರ್ಧನ್ ಪ್ರಶಸ್ತಿ ಸುರೇಶ್ ಅರಸ್ ಅವರ ಪಾಲಿಗಿದೆ. ಪ್ರಶಸ್ತಿ ಪುರಸ್ಕೃತರಿಗೆ ಎರಡು ಲಕ್ಷ ರೂ ಗಳ ನಗದು ಬಹುಮಾನ ಮತ್ತು 50 ಗ್ರಾಂ ಚಿನ್ನದಪದಕ ದೊರೆಯಲಿದೆ.
 
ಇನ್ನು ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ  ಬ್ರಹ್ಮ ಶ್ರೀ ನಾರಾಯಣ ಗುರುಸ್ವಾಮಿ. ಹಾಗೇ ಅತ್ಯುತ್ತಮ ಮನರಂಜನಾ ಚಿತ್ರ  ಗಜಕೇಸರಿ ಸಿನಿಮಾ ಪ್ರಶಸ್ತಿ ಬಾಚಿಕೊಂಡಿದೆ.ಅತ್ಯುತ್ತಮ ಮಕ್ಕಳ ಚಿತ್ರ  ಬಾನಾಡಿ, ಹಾಗೇ  ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿ ಉಳಿದವರು ಕಂಡಂತೆ ಸಿನಿಮಾಕ್ಕೆ ದೊರೆತಿದೆ. ಇನ್ನು ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಅರುಣ್ ದೇವಸ್ಯ ಆಯ್ಕೆಯಾಗಿದ್ರೆ,  ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ  ಡಾ. ಬಿ.ಜಯಶ್ರೀ ಅವರಿಗೆ ಒಲಿದಿದೆ.
 
 ಇನ್ನುಳಿದಂತೆ ಅತ್ಯುತ್ತಮ ಕತೆ  ಪ್ರಶಸ್ತಿ ಲಿವಿಂಗ್ ಸ್ಮೈಲ್ ವಿದ್ಯಾ ಅವರಿಗೆ ದೊರತಿದೆ. ಅತ್ಯುತ್ತಮ ಚಿತ್ರಕಥೆ ಪಿ.ಶೇಷಾದ್ರಿ,  ಅತ್ಯುತ್ತಮ ಸಂಭಾಷಣೆ ಬಿ.ಎಲ್.ವೇಣು, ಅತ್ಯುತ್ತಮ ಛಾಯಾಗ್ರಹಣ  ಸತ್ಯ ಹೆಗಡೆ,  ಅತ್ಯುತ್ತಮ ಸಂಗೀತ ನಿರ್ದೇಶನ ಅಜನೀಶ್ ಲೋಕನಾಥ್, ಅತ್ಯುತ್ತಮ ಸಂಕಲನ – ಶ್ರೀಕಾಂತ, ಅತ್ಯುತ್ತಮ ಬಾಲ ನಟ ಮಾ.ಸ್ನೇಹಿತ್,  ಅತ್ಯುತ್ತಮ ಬಾಲ ನಟಿ ಕು.ಲಹರಿ,ಅತ್ಯುತ್ತಮ ಕಲಾ ನಿರ್ದೇಶನ  ಚಂದ್ರಕಾಂತ್, ಅತ್ಯುತ್ತಮ ಗೀತರಚನೆ  ಹುಲಿಕುಂಟೆ ಮೂರ್ತಿ, ಅತ್ಯುತ್ತಮ ಹಿನ್ನಲೆ ಗಾಯಕ  ಚಿಂತನ್, ಅತ್ಯುತ್ತಮ ಹಿನ್ನಲೆ ಗಾಯಕಿ ಪ್ರಶಸ್ತಿ  ಶ್ರೀಮತಿ ವಿದ್ಯಾ ಮೋಹನ್ ಅವರಿಗೆ ದೊರತಿದೆ. ಇನ್ನು ತೀರ್ಪುಗಾರರ ವಿಶೇಷ ಪ್ರಶಸ್ತಿಗೆ  ಸಾಹಸಿ ಜ್ಯೋತಿರಾಜ್ ಆಯ್ಕೆಯಾಗಿದ್ದಾರೆ.
 

ವೆಬ್ದುನಿಯಾವನ್ನು ಓದಿ