ಕಾಲಿವುಡ್ ಸ್ಟಾರ್ ವಿಲನ್ ಕಿಚ್ಚ ಸುದೀಪ್ ಅವರ ಸಂಭಾವನೆ ಎಷ್ಟೆಂದರೆ !

ಶುಕ್ರವಾರ, 25 ಏಪ್ರಿಲ್ 2014 (09:35 IST)
ಕನ್ನಡ ಸೂಪರ್ ಸ್ಟಾರ್ ಸುದೀಪ್ . ಅವರು ಕನ್ನಡ ಮಾತ್ರವಲ್ಲ ಕನ್ನಡೇತರ  ಚಿತ್ರಗಳಲ್ಲೂ ಸಹ ನಟಿಸಿ ಸಾಕಷ್ಟು ಅಭಿಮಾನಿಗಳನ್ನು ಪಡೆದಿದ್ದಾರೆ. ಕಿಚ್ಚ ಸುದೀಪ್ ಅವರು ರಾಜಮೌಳಿ ಅವರ ನಿರ್ದೇಶನದ ಈಗ ಚಿತ್ರದಲ್ಲಿ  ವಿಲನ್ ಪಾತ್ರದಲ್ಲಿ ನಟಿಸುವುದರ ಮುಖಾಂತರ ಕಾಲಿವುಡ್ ಮತ್ತು ಟಾಲಿವುಡ್ ಸಿನಿಲೋಕಕ್ಕೂ ಸಹ ಹೆಚ್ಚು ಗೊತ್ತಾದರು. ಸುದೀಪ್ ಅವರು ಈಗ ರಜನಿಕಾಂತ್ ಅವರ ಹೊಸ ಚಿತ್ರದಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ. 
 
ಆರಂಭದಲ್ಲಿ ಈ ಚಿತ್ರಕ್ಕೆ ವಿಲನ್ ಆಗಿ ಜಗಪತಿ ಬಾಬು ಹೆಸರು ಕೇಳಿ ಬಂದಿತ್ತು. ಆದರೆ ರಜನಿ ಸುದೀಪ್ ಗೆ ಆದ್ಯತೆ ನೀಡಿರುವುದಾಗಿ  ಕಾಲಿವುಡ್ ಸುದ್ದಿ ವಲಯ ಹೇಳಿದೆ. ಅಲ್ಲದೆ ಈಗ ಇಳಯ ದಳಪತಿ ಎನ್ನುವ ಬಿರುದಾಂಕಿತ ವಿಜಯ್ ನಟನೆಯ ಚಿತ್ರದಲ್ಲೂ ಸಹ ಸುದೀಪ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮುಖಾಂತರ ತಮಿಳು ಚಿತ್ರರಂಗದಲ್ಲೂ ಸಹ ತಮಗೊಂದು ಸ್ಥಾನ ಕಲ್ಪಿಸಿಕೊಳ್ಳುತ್ತಿದ್ದಾರೆ ಸುದೀಪ್. 
 
ಸೋಮವಾರ ಕಿಚ್ಚ ಇದಕ್ಕೆ ಸಂಬಂಧಪಟ್ಟಂತೆ ಕಾಗದ ಪಾತ್ರಗಳಿಗೆ ಸಹಿ ಹಾಕಿದ್ದರೆನ್ನುವ ಸುದ್ದಿಯನ್ನು ಕಾಲಿವುಡ್ ಮೂಲಗಳು ತಿಳಿಸಿವೆ. ಇದು ಒಂದು ಸಂಗತಿಯಾದರೆ, ಸುದೀಪ್ ಇದಕ್ಕಾಗಿ ಆರು ಕೋಟಿರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಅದು ಎಲ್ಲದಕ್ಕಿಂತ ಮುಖ್ಯ ಸಂಗತಿ ಆಗಿದೆ. ಒಬ್ಬ ವಿಲನ್ ಗೆ ಇಷ್ಟು ಪ್ರಮಾಣದ ಸಂಭಾವನೆ ನೀಡುತ್ತಿರುವುದು ಇದೆ ಮೊದಲು ಎನ್ನುತ್ತಿದೆ ಸಿನಿ ಕ್ಷೇತ್ರ. ಈ ಚಿತ್ರದ ಪ್ರಮುಖ ನಿರ್ದೇಶಕ ಶಿಂಬು ದೇವನ್. ಈ ಚಿತ್ರಕೆ ಇನ್ನು ಶೀರ್ಷಿಕೆ ಇಟ್ಟಿಲ್ಲ. ಇದರಲ್ಲಿ ದೀಪಿಕಾ ಪಡುಕೋಣೆ ಮತ್ತು ಶ್ರುತಿ ಹಾಸನ್ ಹೀರೋಯಿನ್ ಗಳಾಗಿ ಕಾಣಸಿಗುತ್ತಿದ್ದಾರೆ ಎನ್ನುವುದು ಸದ್ಯದ ಮತ್ತೊಂದು ಸುದ್ದಿ..

ವೆಬ್ದುನಿಯಾವನ್ನು ಓದಿ