ಹಾಲಿವುಡ್ ನಲ್ಲಿ ಸುದೀಪ್ ಶೈನಿಂಗ್: ರೈಸನ್ ಚಿತ್ರದಪೋಸ್ಟರ್ ಔಟ್

ಮಂಗಳವಾರ, 7 ನವೆಂಬರ್ 2017 (17:51 IST)
ಬೆಂಗಳೂರು: ಹಾಲಿವುಡ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ನಟಿಸುತ್ತಿರುವುದು ಎಲ್ಲರಿಗೂ ಗೊತ್ತು. ಆದರೆ ಈಗ ಚಿತ್ರತಂಡ ಅಧಿಕೃತವಾಗಿ `ರೈಸನ್' ಚಿತ್ರದ ಸುದೀಪ್ ಅವರ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

ರೈಸನ್ ಚಿತ್ರದ ಪೋಸ್ಟರ್ ನ್ನು ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆಯಾಗಿದೆ. ಚಿತ್ರದಲ್ಲಿ ಸುದೀಪ್, ಆರ್ಮಿ ಮಾರ್ಷಲ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಸುದೀಪ್ ನಟಿಸುವುದಷ್ಟೇ ಬಾಕಿ ಇದೆ. `ದಿ ವಿಲನ್' ಚಿತ್ರೀಕರಣ ನಡೆಯುತ್ತಿದ್ದು, ಹೀಗಾಗಿ ಚಿತ್ರದಲ್ಲಿ ಭಾಗವಹಿಸುವುದು ತಡವಾಗಿದೆ. ಹೀಗಾಗಿ ಡಿಸೆಂಬರ್ ಅಂತ್ಯದೊಳಗೆ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಚಿತ್ರವನ್ನು ಆಸ್ಟ್ರೇಲಿಯಾ ಮೂಲದ ನಿರ್ದೇಶಕ ಎಡ್ಡಿ ಆರ್ಯ ನಿರ್ದೇಶಿಸುತ್ತಿದ್ದಾರೆ. ಇದೊಂದು ನೈಜ ಘಟನೆಯಾಧಾರಿತ ಚಿತ್ರವಾಗಿದ್ದು, ಬಹುತೇಕ ಚಿತ್ರೀಕರಣ ಮಂಜಿನ ವಾತಾವರಣದಲ್ಲೇ ನಡೆಯಲಿದ್ದು, ಚಿತ್ರವನ್ನು ಆಸ್ಟ್ರೇಲಿಯಾ ಮತ್ತು ಅಮೆರಿಕದಲ್ಲಿ ಚಿತ್ರೀಕರಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ