ಮಂತ್ರಾಲಯಕ್ಕೆ ಭೇಟಿ ನೀಡಿದ ಸುದೀಪ್
ರಾಯರ ಪಟ್ಟಾಭಿಷೇಕ ಹಾಗೂ ಜನ್ಮದಿನಾಚರಣೆಯನ್ನ ಗುರುವೈಭವೋತ್ಸವವಾಗಿ ಆಚರಣೆ ಮಾಡಲಾಗುತ್ತೆ. ಈ ಹಿನ್ನೆಲೆ ಇಂದು ರಾಯರ 401ನೇ ಪಟ್ಟಾಭಿಷೇಕವಾಗಿದ್ದು, ಸುದೀಪ್ ಮಂತ್ರಾಲಯಕ್ಕೆ ಆಗಮಿಸಿದರು.
ಸುದೀಪ್ ಮಂತ್ರಾಲಯಕ್ಕೆ ಆಗಮಿಸಿದ ನಂತರ ರಾಯರ ಬೃಂದಾವನದ ದರ್ಶನವನ್ನು ಮೊದಲು ಪಡೆದಿದ್ದಾರೆ. ಬಳಿಕ ಕಿಚ್ಚನಿಗೆ ವೇದಿಕೆ ಕಾರ್ಯಕ್ರಮದಲ್ಲಿ ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಗಳು ಸನ್ಮಾನ ಮಾಡಿದ್ದಾರೆ.