ನಿರ್ದೇಶಕ ಪಿ.ಎನ್.ಸತ್ಯ ರವರ ನಿಧನಕ್ಕೆ ಕಂಬನಿ ಮಿಡಿದ ನಟ ಸುದೀಪ್
ಸೋಮವಾರ, 7 ಮೇ 2018 (06:46 IST)
ಬೆಂಗಳೂರು : ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಪಿ.ಎನ್.ಸತ್ಯ ಅವರು ಶನಿವಾರ ಲೋ ಬಿಪಿಯಿಂದ ಕೊನೆಯುಸಿರೆಳಿದಿದ್ದು, ಈ ಬಗ್ಗೆ ಇಡಿ ಸ್ಯಾಂಡಲ್ ವುಡ್ ಸಿನಿಮಾ ತಾರೆಯರು ಕಂಬನಿ ಮಿಡಿದಿದ್ದಾರೆ. ನಟ ಸುದೀಪ್ ಅವರು ಕೂಡ ಪಿ.ಎನ್.ಸತ್ಯ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ನಟ ಸುದೀಪ್ ಅವರು ಈ ಬಗ್ಗೆ ಟ್ವೀಟ್ ಮಾಡಿ,’ ನಾನು ಇನ್ನೂ ಪಿ.ಎನ್.ಸತ್ಯ ಅವರ ಸಾವಿನ ಸುದ್ದಿಯಿಂದ ಹೊರ ಬರಲು ಪ್ರಯತ್ನ ಮಾಡುತ್ತಿದ್ದೇನೆ. ನಾನು ಅವರ ಜೊತೆಗೆ ಅನೇಕ ಕಾರ್ಯಕ್ರಮಗಳಲ್ಲಿ ಮಾತನಾಡುವ ಅವಕಾಶ ಸಿಕ್ಕಿತ್ತು. ಜೊತೆಗೆ ಅವರ ಜೊತೆಗೆ 'ಗೂಳಿ' ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆದಿದೆ. ಆದರೆ ಇಷ್ಟು ಬೇಗ ಅವರ ಹೊರಟು ಬಿಟ್ಟರು!. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ