ದೇವಸ್ಥಾನದ ಬಳಿ ಇರುವ ವೃಕ್ಷಗಳಿಗೆ ಭಕ್ತರು ಪೂಜೆ ಮಾಡುವುದು ಇದೇ ಕಾರಣಕ್ಕಾಗಿಯಂತೆ!
ಭಾನುವಾರ, 6 ಮೇ 2018 (07:21 IST)
ಬೆಂಗಳೂರು : ನಾವು ದೇವಸ್ಥಾನಕ್ಕೆ ಹೋದಾಗ ಆಲಯದ ಬಳಿ ಅರಳಿಮರ, ಬೇವಿನ ಮರ ಇರುವುದನ್ನು ನಾವು ಗಮನಿಸಿರುತ್ತೇವೆ. ಆಲಯಕ್ಕೆ ಬಂದ ಭಕ್ತರು ಈ ಮರಕ್ಕೂ ಪೂಜೆ ಮಾಡುತ್ತಾರೆ. ಆದರೆ ಗುಡಿಯ ಬಳಿ ಅರಳಿಮರ, ಬೇವಿನ ಮರಗಳು ಯಾಕೆ ಇರುತ್ತವೆ? ಅವನ್ನು ಪೂಜಿಸಲು ಕಾರಣ ಏನು ಎಂಬುದು ಅನೇಕರಿಗೆ ತಿಳಿದಿರುವುದಿಲ್ಲ. ಅದಕ್ಕೆ ಕಾರಣ ಇಲ್ಲಿದೆ ನೋಡಿ.
ನಮ್ಮ ಶಾಸ್ತ್ರಗಳು, ವೇದಗಳ ಪ್ರಕಾರ ಗುಡಿಯಲ್ಲಿ ಇರುವ ಅರಳಿಮರ ಶ್ರೀಮಹಾವಿಷ್ಣುವಾಗಿ, ಬೇವಿನ ಮರ ಲಕ್ಷ್ಮಿದೇವಿಯಾಗಿ ಭಾವಿಸಲಾಗುತ್ತದೆ. ಈ ಜೋಡಿ ವೃಕ್ಷಗಳನ್ನು ಪೂಜಿಸಿ ಪ್ರದಕ್ಷಿಣೆ ಮಾಡುವ ಮೂಲಕ ಅನೇಕ ದೋಷಗಳು ದೂರವಾಗಿ ದಂಪತಿಗಳು ಸಂಪೂರ್ಣ ದಾಂಪತ್ಯವನ್ನು ಪಡೆಯುತ್ತಾರೆ. ಅಲ್ಲದೇ ಬ್ರಹ್ಮ ವಿಷ್ಣು ಪರಮೇಶ್ವರರು ತಮ್ಮ ದಿವ್ಯಾಯುಧಗಳನ್ನು ಅರಳಿಮರದ ಮೇಲೆ ಇಡುತ್ತಾರೆಂದು ಪುರಾಣಗಳು ಹೇಳುತ್ತವೆ.
ಅರಳಿವೃಕ್ಷವನ್ನು ಪೂಜಿಸುವುದರಿಂದ ಶನಿಬಾಧೆ ನಿವಾರಣೆಯಾಗುತ್ತದೆ. ಸಂತಾನಪ್ರಾಪ್ತಿ ಉಂಟಾಗುತ್ತದೆ. ವಿವಾಹ ಸಮಸ್ಯೆಗಳು ನಿವಾರಣೆಯಾಗುತ್ತವೆ. ಲಕ್ಷ್ಮಿ ಕಟಾಕ್ಷ ಉಂಟಾಗುತ್ತದೆ. ಅದೇ ರೀತಿ ಬೇವಿನ ಗಾಳಿಗೆ ಅದೆಷ್ಟೋ ಕಾಯಿಲೆಗಳು ದೂರವಾಗುತ್ತವೆ. ಬೇವಿನ ಎಲೆಗಳನ್ನು ನೀರಿನಲ್ಲಿ ಹಾಕಿ ಕಾಯಿಸಿ ಆ ನೀರಿನಲ್ಲಿ ಸ್ನಾನ ಮಾಡುವುದರಿಂದ ಚರ್ಮ ಸಂಬಂಧಿ ಕಾಯಿಲೆಗಳು ನಶಿಸುತ್ತವೆ ಎಂದು ಆಯುರ್ವೇದ ಹೇಳುತ್ತದೆ.
ಈ ರೀತಿ ಆಧ್ಯಾತ್ಮಿಕವಾಗಿ, ಆರೋಗ್ಯ ಪರವಾಗಿ ಮನುಷ್ಯರಿಗೆ ಇವು ಒಳಿತು ಮಾಡುತ್ತಿವೆ. ಹಾಗಾಗಿಯೇ ದೈವಕ್ಕೆ ಪ್ರತಿರೂಪವಾದ ಈ ವೃಕ್ಷಗಳನ್ನು ಆಲಯಕ್ಕೆ ಬರುವ ಭಕ್ತರು ಭಕ್ತಿ ಶ್ರದ್ದೆಗಳಿಂದ ಪೂಜಿಸುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ